More

    ಪೊಲೀಸ್ ಹುದ್ದೆಯ ಗೌರವ ಕಾಪಾಡಿ

    ಐಮಂಗಲ: ಪ್ರಶಿಕ್ಷಣಾರ್ಥಿಗಳು ತರಬೇತಿ ಅವಧಿಯಲ್ಲಿ ಉತ್ತಮವಾಗಿ ಕಲಿತು, ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಸಲಹೆ ನೀಡಿದರು.

    ಗ್ರಾಮದ ಪೊಲೀಸ್ ತರಬೇತಿ ಶಾಲೆ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ 6ನೇ ತಂಡದ ಪೋಲಿಸ್ ಪ್ರಶಿಕ್ಷಣಾರ್ಥಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಯುಪಿಗೆ ಹೋಗುತ್ತಿದ್ದ ಜಿಲ್ಲೆಯ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿದ್ದು, ತಪಾಸಣೆಯಿಂದ ಅವರಲ್ಲಿ ಕರೊನಾ ಸೋಂಕು ಕಂಡುಬಂದಿದೆ. ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕರೊನಾ ಸೊಂಕಿನ ಪ್ರಕರಣಗಳಿಲ್ಲ ಎಂದರು.

    ಪೊಲೀಸ್ ಇಲಾಖೆ ಬೇರೆ ಇಲಾಖೆಯಂತೆ ಅಲ್ಲ. ದಿನದ 24 ಗಂಟೆಯೂ ಜಾಗ್ರತರಾಗಿ ಕೆಲಸ ಮಾಡಬೇಕು. ಇದಕ್ಕಾಗಿ ಮಾನಸಿಕ, ದೈಹಿಕವಾಗಿ ಸಬಲರಾಗಿರಬೇಕು. ಜನಸಾಮಾನ್ಯರಲ್ಲಿ ಪೊಲೀಸ್ ಬಗ್ಗೆ ಗೌರವವಿದೆ. ಅದಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು ಎಂದು ಸೂಚಿಸಿದರು.

    ಪ್ರಶಿಕ್ಷಣಾರ್ಥಿಗಳಿಗೆ ಆರ್‌ಪಿಐ ಬಿ.ಪರಶುರಾಮ್ ಪ್ರಮಾಣ ವಚನ ಬೋಧಿಸಿದರು. ಪ್ರಾಂಶುಪಾಲ ಪಿ.ಪಾಪಣ್ಣ, ಸಿಪಿಐಗಳಾದ ವರದರಾಜು, ಎಸ್.ಟಿ.ಒಡೆಯರ್, ಮಹಾಂತೇಶ್ ಕೂನಬೇವು, ಶ್ರೀಶೈಲ್ ಮೂರ್ತಿ, ಎಎಒ ಬಸವರಾಜ್, ಕಾನೂನು ಶಿಕ್ಷಕರಾದ ದಿನೇಶ್ ಸಿದ್ದವ್ವನಹಳ್ಳಿ, ಲಕ್ಷಿ ್ಮೀನರಸಿಂಹ, ಪ್ರೊ.ಚಿದಾನಂದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts