More

    ಆತ್ಮರಕ್ಷಣೆಗೆ ಶಸ್ತ್ರಾಸ್ತ್ರ ತರಬೇತಿ ಅತ್ಯವಶ್ಯಕ

    ಐಮಂಗಲ: ಆತ್ಮರಕ್ಷಣೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶಸ್ತ್ರಾಸ್ತ್ರ ತರಬೇತಿ ಅತ್ಯವಶ್ಯಕ ಎಂದು ಪೊಲೀಸ್ ತರಬೇತಿ ಶಾಲೆಯ ಎಸ್ಪಿ ಹಾಗೂ ಪ್ರಾಂಶುಪಾಲ ಪಿ.ಪಾಪಣ್ಣ ತಿಳಿಸಿದರು.

    ಗ್ರಾಮದ ಪೊಲೀಸ್ ತರಬೇತಿ ಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಏರ್ಪಡಿಸಿದ್ದ ಶಸ್ತ್ರಾಸ್ತ್ರ ಬಳಕೆ ಹಾಗೂ ಪ್ರಾಯೋಗಿಕ ಗುರಿ ಅಭ್ಯಾಸ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.

    ಕಾಡು ಪ್ರಾಣಿಗಳು ದಾಳಿ ಮಾಡಿದಾಗ ಅವುಗಳ ಗಮನ ಬೇರೆಡೆ ಸೆಳೆಯಲು ಹಾಗೂ ಕಿಡಿಗೇಡಿಗಳು ಮತ್ತು ಮರಗಳ್ಳರಿಂದ ಆತ್ಮ ರಕ್ಷಣೆ ಮಾಡಿಕೊಳ್ಳಲು ಆಯುಧಗಳ ಬಳಕೆ ಅವಶ್ಯ. ಬಂದೂಕುಗಳನ್ನು ವನ್ಯ ಜೀವಿಗಳ ಹತ್ಯೆಗೆ ಬಳಸಬಾರದು ಎಂದು ತಿಳಿಸಿದರು.

    ಇತ್ತೀಚೆಗೆ ಕಾಡಿನ ನಾಶ ಹೆಚ್ಚಾದ್ದರಿಂದ ಅಲ್ಲಿನ ಪ್ರಾಣಿಗಳು ಆಹಾರಕ್ಕಾಗಿ ನಾಡಿನತ್ತ ಬರುತ್ತಿರುವುದು ಸಾಮಾನ್ಯವಾಗಿದೆ. ಇವುಗಳ ನಿಯಂತ್ರಣಕ್ಕೆ ಶಾಲಾ ಮಕ್ಕಳಾದಿಯಾಗಿ ಸರ್ವರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಹೆಚ್ಚೆಚ್ಚು ಗಿಡ ಬೆಳೆಸಿ ಅರಣ್ಯ ಸಂಪತ್ತನ್ನು ಉಳಿಸಬೇಕು ಎಂದು ಕಿವಿಮಾತು ಹೇಳಿದರು.

    ಶಸ್ತ್ರಾಸ್ತಗಳ ಬಳಕೆ, ಅವುಗಳ ನಿರ್ವಹಣೆ, ಕಾನೂನು ಜ್ಞಾನ ನೀಡಿದ್ದು ತುಂಬಾ ಉಪಯುಕ್ತವಾಯಿತು. ಮಹಜರು, ಸಾಕ್ಷಿ, ವನ್ಯ ಜೀವಿಗಳ ಸಂರಕ್ಷಣೆ ಕುರಿತು ಉಪಯುಕ್ತ ಮಾಹಿತಿ ದೊರೆಯಿತು. ಪ್ರತಿ ವರ್ಷವೂ ಇಂತಹ ಕಾರ್ಯಾಗಾರ ನಡೆದರೆ ಬಹಳಷ್ಟು ಅನುಕೂಲ ಎಂದು ವಲಯ ಅರಣ್ಯಧಿಕಾರಿಗಳಾದ ಪ್ರದೀಪ್ ಪವಾರ್, ಹಸನ್‌ಬಾಷಾ ಅಭಿಪ್ರಾಯ ಹಂಚಿಕೊಂಡರು.

    ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ವಿನಯ್‌ಕುಮಾರ್ ಪ್ರಥಮ, ಅರಣ್ಯ ರಕ್ಷಕರಾದ ಜಿ.ಟಿ.ಉಷಾ ಪ್ರಥಮ, ವೆಂಕಟೇಶ್ ದ್ವೀತಿಯ, ಅರಣ್ಯ ವಲಯಾಧಿಕಾರಿ ಪ್ರದೀಪ್ ಪವಾರ್ ತೃತೀಯ ಸ್ಥಾನ ಪಡೆದರು.

    ಜಿಪಂ ಸದಸ್ಯೆ ಟಿ.ಆರ್.ರಾಜೇಶ್ವರಿ, ಜಿಲ್ಲಾ ಅರಣ್ಯಾಧಿಕಾರಿ ಕೆ.ಚಂದ್ರಶೇಖರ್ ನಾಯಕ, ಸಿಪಿಐ ವರದರಾಜು, ಜೆ.ಲಕ್ಷ್ಮಣ್, ಎಡಿಪಿ ಸತೀಶ್, ಆರ್‌ಪಿಐ ಬಿ.ಪರಶುರಾಮ್, ಪೊಲೀಸ್ ತರಬೇತಿ ಶಾಲೆ ಶಸ್ತ್ರಾಗಾರ ಪ್ರದೀಪ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts