More

    ರೈತ ಸಂಪರ್ಕ ಕೇಂದ್ರದಲ್ಲೇ ಬಿತ್ತನೆ ಬೀಜ ಖರೀದಿ

    ಐಮಂಗಲ: ಬಿತ್ತನೆ ಬೀಜ, ಔಷಧ, ಕ್ರಿಮಿನಾಶಕಗಳನ್ನು ರೈತ ಸಂಪರ್ಕ ಕೇಂದ್ರದಲ್ಲೇ ರಿಯಾಯಿತಿ ದರದಡಿ ಖರೀದಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಹೇಳಿದರು.

    ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಸೋಮವಾರ ರೈತರಿಗೆ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಅಧಿಕಾರಿಗಳು ರೈತರನ್ನು ಅಲೆದಾಡಿಸಬಾರದು ಎಂದರು.

    ರೈತ ಪಿ.ಸುದರ್ಶನ್ ಮಾತನಾಡಿ, ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿಸುವ ಬೀಜ, ರಸಗೊಬ್ಬರ, ಔಷಧಗಳಿಗೆ ರಸೀದಿ ನೀಡುವಂತೆ ಮನವಿ ಮಾಡಿದರು.

    ಸಹಾಯಕ ಕೃಷಿ ನಿರ್ದೇಶಕಿ ಉಲ್ಫರ್ ಜೈಮಾ ಮಾತನಾಡಿ, ಬಿತ್ತನೆ ಬೀಜಗಳ ದರ ಪಟ್ಟಿ ಹಾಕಲಾಗಿದೆ. ಯಾರಿಂದಲೂ ಹೆಚ್ಚು ಹಣ ಪಡೆಯುವುದಿಲ್ಲ ಎಂದರು.

    ಜಿಪಂ ಸದಸ್ಯೆ ಟಿ.ಆರ್.ರಾಜೇಶ್ವರಿ, ಕೃಷಿ ಅಧಿಕಾರಿ ಎಸ್.ರಾಧಮ್ಮ, ಸಿಬ್ಬಂದಿ ಶಿವು, ಶಿವಣ್ಣ, ಗಿರೀಶ್, ಮುಖಂಡರಾದ ಕಲ್ಲಹಟ್ಟಿ ಸಿ.ತಿಪ್ಪೇಸ್ವಾಮಿ, ಪಿ.ಎಸ್.ಕೃಷ್ಣಾರೆಡ್ಡಿ, ರಾಮಣ್ಣ, ರಾಜಶೇಖರ್, ಕಂದಿಕೆರೆ ಸುರೇಶ್‌ಬಾಬು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts