More

    ಟಾರ್​ ಪ್ಲಾಂಟ್​ನಿಂದ ಅನಾರೋಗ್ಯ; ಬೇರೆಡೆ ಸ್ಥಳಾಂತರಿಸಲು ಕಣಿವೆಕಲ್ಲು, ರಾಮಾಪುರ ಗ್ರಾಮಸ್ಥರ ಆಗ್ರಹ 

    
    

    ಬೂದಿಕೋಟೆ: ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯಿಂದ ಪರವಾನಗಿ ಪಡೆಯದೆ ಟಾರ್​ ಮತ್ತು ಜಲ್ಲಿ ಮಿಕ್ಸರ್​ ಟಕ ಆರಂಭಿಸಿದ್ದು, ಇದರಿಂದ ಬರುವ ಕೆಮಿಕಲ್​ಯುಕ್ತ ದಟ್ಟ ಹೊಗೆಯಿಂದ ಸುತ್ತಮುತ್ತ ಗ್ರಾಮಗಳ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

    ಬಂಗಾರಪೇಟೆ-ಮಾಲೂರು ಮಾರ್ಗದ ಕಣಿವೆಕಲ್ಲು ಹಾಗೂ ರಾಮಾಪುರ ಗೇಟ್​ ಮುಖ್ಯರಸ್ತೆ ಬಳಿ ಬೆಂಗಳೂರು ಮೂಲದ ಆರ್​.ಎಂ.ಪ್ರಾಜೆಕ್ಟ್​ ಎಂಬ ಖಾಸಗಿ ಕಂಪೆನಿ ಟಕ ತೆರೆದಿದೆ.

    ಇಲ್ಲಿಂದ ನಿತ್ಯ ನೂರಾರು ಟಿಪ್ಪರ್​ಗಳ ಮೂಲಕ ಜಲ್ಲಿ ಹಾಗೂ ಟಾರ್​ ಮಿಕ್ಸ್​ಅನ್ನು ಬೇರೆಡೆಗೆ ಸಾಗಿಸಲಾಗುತ್ತದೆ.

    ಟಮಕದಲ್ಲಿ ಟಾರ್​ ಹಾಗೂ ಜಲ್ಲಿ ಮಿಶ್ರಣ ಮಾಡುವ ವೇಳೆ ಭಾರಿ ಪ್ರಮಾಣದಲ್ಲಿ ಕೆಮಿಕಲ್​ಯುಕ್ತ ದಟ್ಟ ಹೊಗೆ ಉತ್ಪತ್ತಿಯಾಗುತ್ತಿದೆ. ಇದು ಬಂಗಾರಪೇಟೆ ಮಾಲೂರು ರಸ್ತೆಯೆಲ್ಲಾ ಆವರಿಸಿರುತ್ತದೆ. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ.

    ಅನಾರೋಗ್ಯಕ್ಕೆ ತುತ್ತಾದ ಜನ: ಕೆಮಿಕಲ್​ ಮಿಶ್ರಿತ ಹೊಗೆಯು ರಾಮಾಪುರ, ನಾಗಲಾಪುರ, ಕಣಿವೆಕಲ್ಲು, ಅಲ್ಲಿಪುರ ಸೇರಿದಂತೆ ಹಲವು ಗ್ರಾಮಗಳಿಗೆ ವ್ಯಾಪಿಸುತ್ತಿದೆ.

    ಜನರಲ್ಲಿ ಉಸಿರಾಟದ ಸಮಸ್ಯೆ, ಕೆಮ್ಮು, ವಾಕರಿಕೆ, ತಲೆನೋವು ಸಮಸ್ಯೆಗಳು ಕಾಡುತ್ತಿವೆ. ಸಾರ್ವಜನಿಕರು ಟಕವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

    ಗ್ರಾಮಸ್ಥರು ತಹಸೀಲ್ದಾರ್​ಗೆ ಎಂ. ದಯಾನಂದ್​ ಮನವಿ ಸಲ್ಲಿಸಿದ್ದರಿಂದ ಅವರು ಸ್ಥಳ ಪರಿಶೀಲಿಸಿ ತಾತ್ಕಾಲಿಕವಾಗಿ ಮುಚ್ಚುವಂತೆ ತಿಳಿಸಿದ್ದಾರೆ. ಗ್ರಾಮಗಳ ಜನರ ಆರೋಗ್ಯ ಕಾಪಾಡಲು ಶ್ರೀವಾಗಿ ಟಕವನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.

    ಟಾರ್​ ಪ್ಲಾಂಟ್​ನಿಂದ ಅನಾರೋಗ್ಯ; ಬೇರೆಡೆ ಸ್ಥಳಾಂತರಿಸಲು ಕಣಿವೆಕಲ್ಲು, ರಾಮಾಪುರ ಗ್ರಾಮಸ್ಥರ ಆಗ್ರಹ 
    ಟಾರ್​ ಹಾಗೂ ಜಲ್ಲಿ ಮಿಶ್ರಣ ಟಕದ ಬಳಿ ತಹಸೀಲ್ದಾರ್​ ಎಂ.ದಯಾನಂದ್​ ಪರಿಶೀಲಿಸಿದರು.

     

    ಟಮಕದಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ತಿಳಿಸಿ ತಾತ್ಕಾಲಿಕವಾಗಿ ಮುಚ್ಚುವಂತೆ ತಿಳಿಸಲಾಗಿದೆ.
    | ಎಂ.ದಯಾನಂದ್​, ತಹಸೀಲ್ದಾರ್​, ಬಂಗಾರಪೇಟೆ

    ದಟ್ಟ ಹೊಗೆಯಿಂದ ಅಲ್ಲಿನ ಜನರಿಗೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ತಹಸೀಲ್ದಾರರು ದೂರವಾಣಿ ಮೂಲಕ ತಿಳಿಸಿದ್ದಾರೆ. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಟಕ ಸ್ಥಳಾಂತರಿಸುವ ಕ್ರಮಕೈಗೊಳ್ಳಲಾಗುತ್ತದೆ.
    | ಬಿ.ಸಿ.ಶಿವಮೂರ್ತಿ, ಉಪ ಪರಿಸರ ಅಧಿಕಾರಿ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts