More

    ಅವೈಜ್ಞಾನಿಕ ಮೀನುಗಾರಿಕೆಗಾಗಿ ಕಡಲ ತೀರದ ಮರಳು ಸಂಗ್ರಹ

    ಕಾರವಾರ: ನಗರದ ಲೇಡಿ ಬೀಚ್​ನಲ್ಲಿ ಅಕ್ರಮ ಮೀನುಗಾರಿಕೆ ಹಾಗೂ ಮರಳುಗಾರಿಕೆ ಮತ್ತೆ ಪ್ರಾರಂಭವಾಗಿದೆ. ಲೇಡಿ ಕಡಲ ತೀರದಲ್ಲಿ ಅವೈಜ್ಞಾನಿಕ ಮೀನುಗಾರಿಕೆಗಾಗಿ ಮರಳು ಸಂಗ್ರಹಿಸುತ್ತಿದ್ದ ಕೆಲವರನ್ನು ಸ್ಥಳೀಯರು ಹೆದರಿಸಿ ಓಡಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

    ಕ್ಯಾಸುರಿನಾ (ಗಾಳಿ) ಮರದ ಎಲೆಗಳನ್ನು ಕೊಯ್ದು, ಅದಕ್ಕೆ ಮರಳು ತುಂಬಿದ ಪ್ಲಾಸ್ಟಿಕ್ ಚೀಲವನ್ನು ಕಟ್ಟಿ ಸಮುದ್ರ ಮಧ್ಯದಲ್ಲಿ ಮುಳುಗಿಸಲಾಗುತ್ತದೆ. ಸಮುದ್ರದಾಳದಲ್ಲಿ ಕೊಳೆತ ಕ್ಯಾಸುರಿನಾ ಎಲೆಗಳಿಗೆ ಆಕರ್ಷಣೆಗೊಳ್ಳುವ ಕಪ್ಪೆ ಬೊಂಡಾಸ್ ಎಂಬ ಮೀನುಗಳು ಮೊಟ್ಟೆ ಇಡುತ್ತವೆ. ಕೊಳೆತ ಎಲೆಗಳು, ಟೊಂಗೆಗಳ ಮೇಲೆ ಕುಳಿತ ಕಪ್ಪೆ ಬೊಂಡಾಸ್ ಮೀನನ್ನು ಮೀನುಗಾರರು ಹಿಡಿದು ತರುತ್ತಾರೆ. ಕೇರಳ ಹಾಗೂ ತಮಿಳುನಾಡಿನಿಂದ ಆಗಮಿಸುವ ಮೀನುಗಾರರು ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಈ ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದಕ್ಕಾಗಿ ಲೇಡಿ ಕಡಲ ತೀರದಲ್ಲಿರುವ ಮರಳನ್ನು ಖಾಲಿ ಮಾಡಲಾಗುತ್ತಿದೆ.

    ಮಾಧ್ಯಮ ವರದಿ ಹಾಗೂ ಮೀನುಗಾರಿಕೆ ಇಲಾಖೆ ಎಚ್ಚರಿಕೆಯ ನಂತರ ಮೀನುಗಾರಿಕೆಯ ಈ ಅವೈಜ್ಞಾನಿಕ ಪದ್ಧತಿಗೆ ಕಳೆದ ವರ್ಷ ತೆರೆ ಬಿದ್ದಿತ್ತು. ಈ ಬಾರಿ ಮತ್ತೆ ಪ್ರಾರಂಭವಾಗಿರುವುದು ಸ್ಥಳೀಯ ಸಾಂಪ್ರದಾಯಿಕ ಮೀನುಗಾರರ ಆತಂಕಕ್ಕೆ ಕಾರಣವಾಗಿದೆ.

    ಲೇಡಿ ಬೀಚ್​ನಲ್ಲಿ ಬೆಳಗಿಜಾವ ಉಸುಕು ತೆಗೆಯುತ್ತಿರುವ ಸುದ್ದಿ ಬಂದಿದೆ. ನಮ್ಮ ಜನರನ್ನು ಕಳಿಸಿ ಕ್ರಮಕ್ಕೆ ಸೂಚಿಸುತ್ತೇನೆ. | ಚಂದ್ರಕಾಂತ ಹರಿಹರ ಕರಾವಳಿ ಕಾವಲುಪಡೆ ಇನ್ಸ್​ಪೆಕ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts