More

    ರಾಜ್ಯದಾದ್ಯಂತ ಎಲ್ಲ ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಸರ್ಕಾರದ ನಿರ್ಧಾರ: ಐವತ್ತು ಲಕ್ಷಕ್ಕೂ ಹೆಚ್ಚು ಜನ ನಿರಾಳ

    ಬೆಂಗಳೂರು: ರಾಜ್ಯದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವುದಕ್ಕೆ ಸಂಬಂಧಿಸಿದ ಸಮಸ್ಯೆಗೆ ರಾಜ್ಯ ಸರ್ಕಾರ ಕೊನೆಗೂ ಮುಕ್ತಿ ಕಾಣಿಸಿದೆ.

    ಎಲ್ಲ ಅಕ್ರಮ ಕಟ್ಟಡಗಳನ್ನೂ ಸಕ್ರಮಗೊಳಿಸುವ ಮೂಲಕ ಸಂಬಂಧಿಸಿದ ಸ್ಥಳೀಯ ಆಡಳಿತಗಳಿಗೆ ಹೆಚ್ಚಿನ ಆದಾಯ ಕ್ರೋಡೀಕರಿಸಲು ಮತ್ತು ಸಾರ್ವಜನಿಕರಿಗೆ ಈ ಸಮಸ್ಯೆಯಿಂದ ಮುಕ್ತಿ ದೊರಕಿಸಲು ಸಚಿವ ಆರ್. ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

    ಹಲವಾರು ಅನಧಿಕೃತ ಬಡಾವಣೆಗಳು ಮತ್ತು ಕಟ್ಟಡಗಳಿಗೆ ಸರ್ಕಾರ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಿದೆ. ಆದರೆ ಸರ್ಕಾರಕ್ಕೆ ಯಾವುದೇ ತೆರಿಗೆ ಬರುತ್ತಿಲ್ಲ. ಆದ್ದರಿಂದ ಅನಧಿಕೃತ ಕಟ್ಟಡ ನಿರ್ಮಾಣವನ್ನು ಸಕ್ರಮಗೊಳಿಸುವುದರೊಂದಿಗೆ ರಾಜ್ಯ ಸರ್ಕಾರಕ್ಕೆ ರಾಜಸ್ವ ಸಂಗ್ರಹವೂ ಮಾಡಲು ಉದ್ದೇಶಿಸಿದೆ ಎಂದು ಸಚಿವರು ಸಭೆ ಬಳಿಕ ತಿಳಿಸಿದರು.

    ಬೆಂಗಳೂರು ನಗರವೊಂದರಲ್ಲಿಯೇ 2.93 ಲಕ್ಷ ಅನಧಿಕೃತ ಕಟ್ಟಡಗಳಿವೆ. ಒಂದು ಹಳೆ ಸಮೀಕ್ಷೆಯ ಪ್ರಕಾರ ರಾಜ್ಯದಾದ್ಯಂತ 35 ಲಕ್ಷ ಅನಧಿಕೃತ ಕಟ್ಟಡಗಳಿವೆ. ಈ ಸಂಖ್ಯೆ ಈಗ ಇದು ದ್ವಿಗುಣಗೊಂಡಿರಬಹುದು. ಬೆಂಗಳೂರು ಹೊರತು ಪಡಿಸಿ ಇತರೆಡೆಗಳಲ್ಲಿ ಅನಧಿಕೃತ ಕಟ್ಟಡಗಳಿಗೆ ದ್ವಿಗುಣ ತೆರಿಗೆ ವಿಧಿಸಲಾಗುತ್ತಿದೆ. ಕಾನೂನಿನಡಿ ಶೇ. 50ರವರೆಗಿನ ನಿರ್ಮಾಣ ನಿಯಮ ಉಲ್ಲಂಘನೆಗೆ ಶೇ. 6ರವರೆಗೆ ಹಾಗೂ ಅದಕ್ಕಿಂತ ಹೆಚ್ಚಿನ ಉಲ್ಲಂಘನೆಗೆ ಮಾರುಕಟ್ಟೆ ಮೌಲ್ಯದ ಶೇ. 25ರ ವರೆಗೆ ದಂಡ ವಿಧಿಸಲು ಅವಕಾಶವಿದೆ.

    ಇಂದಿನ ಸಭೆಯಲ್ಲಿ ಅನಧಿಕೃತ ಆಸ್ತಿಗಳ ಸಕ್ರಮಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪುನರ್ ರಚಿಸಲು ತೀರ್ಮಾನಿಸಲಾಗಿದೆ. ಇತರ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಅಧ್ಯಯನ ನಡೆಸಲು ಸಹ ತೀರ್ಮಾನಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯು ಒಂದು ವಾರದೊಳಗೆ ಹೊಸ ಮಾರ್ಗಸೂಚಿಯನ್ನು ಸಿದ್ಧ ಪಡಿಸಲಿದೆ ಎಂದು ಹೇಳಿದರು.

    ಕೋವಿಡ್​-19 ಹರಡುವಿಕೆ ತಡೆಯಲು ಪೋಲಿಯೋ ಕಣ್ಗಾವಲು ಸಿಬ್ಬಂದಿ ಬಳಕೆ

    ಕರೊನಾ ಲಾಕ್​ಡೌನ್​ ಎಫೆಕ್ಟ್​: ಇಂಧನ ಮಾರಾಟದಲ್ಲಿ ಭಾರಿ ಕುಸಿತ, ಎಲ್​ಪಿಜಿ ಬಳಕೆಯಲ್ಲಿ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts