More

    ಅಗ್ನಿ ಅವಘಡದಿಂದ ಕಟ್ಟಿಗೆ ಅಡ್ಡೆ, ಗ್ಯಾರೇಜ್ ಭಸ್ಮ

    ಇಳಕಲ್ಲ(ಗ್ರಾ): ಇಲ್ಲಿಯ ಸಪ್ಪರದ ಪ್ಲಾಟ್‌ನ ಲಕ್ಷ್ಮೀ ನಗರದ ಲಕ್ಷ್ಮೀ ದೇವಸ್ಥಾನದ ಹಿಂದುಗಡೆಯ ಮೂರು ಅಂಗಡಿಗಳಿಗೆ ಶನಿವಾರ ಬೆಂಕಿ ತಗುಲಿ 50 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

    ಯಾರೋ ಕಿಡಿಗೇಡಿಗಳು ಸಿಗರೇಟ್ ಸೇದಿ ಎಸೆದು ಹೋಗಿದ್ದರಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
    ದೇವಪ್ಪ ಬಡಿಗೇರ ಎಂಬುವವರಿಗೆ ಸೇರಿದ್ದ ಕಟ್ಟಿಗೆ ಅಡ್ಡೆಗೆ ಬೆಂಕಿ ತಗುಲಿ 40 ಲಕ್ಷ ರೂ. ಮೌಲ್ಯದ ಕಟ್ಟಿಗೆ ಸುಟ್ಟಿದೆ. ಅಲ್ಲಿ ಕಟ್ಟಲಾಗಿದ್ದ ಐದು ಆಡುಗಳಲ್ಲಿ ಒಂದು ಆಡು ಬೆಂಕಿಗೆ ಆಹುತಿಯಾಗಿದೆ. ಈರಪ್ಪ ಬಡಿಗೇರ ಎಂಬುವವರ ಕಟ್ಟಿಗೆ ಅಡ್ಡೆ ಸಹ ಸುಟ್ಟಿದ್ದು 7 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಪಕ್ಕದಲ್ಲೇ ಇದ್ದ ಆರ್ೀ ಅತ್ತಾರ ಎಂಬುವವರ ಗ್ಯಾರೇಜ್‌ಗೆ ಬೆಂಕಿ ತಗುಲಿ 3 ಲಕ್ಷ ರೂ. ಮೌಲ್ಯದ ವಸ್ತುಗಳು ಹಾನಿಯಾಗಿವೆ.

    ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಾಕಷ್ಟು ಶ್ರಮಪಟ್ಟರು. ಅಗ್ನಿ ಶಾಮಕ ದಳದ ಪ್ರಭಾರ ಠಾಣಾಧಿಕಾರಿ ಜಗದೀಶ ಗಿರಡ್ಡಿ, ಸಹಾಯಕರಾದ ಎಂ.ಪಿ. ಅಮರಗೋಳ, ಮಹಮ್ಮದಯಾಸೀನ್, ಬಿ.ವೈ. ವಣಿಕ್ಯಾಳ, ಆಶೋಕ ಕಾಮಾ, ವಿನೋದ ಭಜಂತ್ರಿ, ಅಶೋಕ ಭಜಂತ್ರಿ ಬೆಂಕಿ ನಂದಿಸಿದರು. ಇಳಕಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಎಸ್.ಬಿ. ಪಾಟೀಲ ತನಿಖೆ ನಡೆಸಿದ್ದಾರೆ. ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ ಭೇಟಿ ನೀಡಿ ಪರಿಶೀಲಿಸಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts