More

    ಕರೊನಾ ನಿಯಂತ್ರಿಸಲು ಕೈಜೋಡಿಸಿ

    ಇಳಕಲ್ಲ: ಮಹಾಮಾರಿ ಕರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವುದರಿಂದ ಅದರ ತಡೆಗೆ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

    ಮಂಗಳವಾರ ನಗರದ ಶಾಸಕ ದೊಡ್ಡನಗೌಡ ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕರೊನಾ ನಿಯಂತ್ರಿಸಲು ಸರ್ಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಕರೊನಾ ಸೋಂಕಿತರಿಗೆ ಬೇಕಾದ ಬೆಡ್, ಆಕ್ಸಿಜನ್ ಸೇರಿ ವೈದ್ಯಕೀಯ ಸಲಕರಣೆಗಳನ್ನು ಸರ್ಕಾರ ಪೂರೈಸಲು ಮುಂದಾಗಿದೆ ಎಂದರು.

    ಕರೊನಾ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕು ಹೊರತು ಭಯಗೊಳ್ಳಬಾರದು. ಲಾಕ್‌ಡೌನ್ ಇರುವುದರಿಂದ ತೀರ ಅಗತ್ಯವಿದ್ದರೆ ಮಾತ್ರ ಹೊರ ಬನ್ನಿ. ಇಲ್ಲದಿದ್ದರೆ ಮನೆಯಲ್ಲಿ ಸುರಕ್ಷಿತವಾಗಿ, ಆರಾಮವಾಗಿ ಇರಬೇಕು ಎಂದು ತಿಳಿಸಿದರು.

    ಮುಖಂಡರಾದ ಅರವಿಂದ ಮಂಗಳೂರ, ರಾಜುಗೌಡ ಪಾಟೀಲ, ಶ್ಯಾಮಸುಂದರ ಕರವಾ, ನಗರಸಭೆ ಸದಸ್ಯರಾದ ಸುಗುರೇಶ ನಾಗಲೋಟಿ, ಚಂದ್ರಶೇಖರ ಏಕಬೋಟಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts