More

    ಇಳಕಲ್ಲದಲ್ಲಿ ನೂಲಿನ ಘಟಕ ಸ್ಥಾಪಿಸಿ

    ಇಳಕಲ್ಲ: ಕೇಂದ್ರ ಸರ್ಕಾರದ ಪವರ್ ಟೆಕ್ಸ್ ಇಂಡಿಯಾದ ನೂಲು ನಿಧಿ ಯೋಜನೆಯಡಿ ನೂಲಿನ ಘಟಕವನ್ನು ಇಳಕಲ್ಲ ನಗರದಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗುವ ಮೂಲಕ ನೇಕಾರರ ಹಿತವನ್ನು ಕಾಪಾಡಬೇಕು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

    ಈ ಯೋಜನೆಯೂ ಕೇಂದ್ರ ಸರ್ಕಾರದ ವಂತಿಗೆಯೊಂದಿಗೆ ರಾಜ್ಯ ಸರ್ಕಾರದ ಗರಿಷ್ಠ 50 ಲಕ್ಷ ರೂ. ಸಹಾಯಧನವನ್ನು ಸೇರಿಸಿ ರಾಜ್ಯದಲ್ಲಿ ವಿದ್ಯುತ್ ಮಗ್ಗಗಳ ಸಾಂದ್ರತೆ ಇರುವ ಎರಡು ಘಟಕಗಳಲ್ಲಿ ನೂಲಿನ ಘಟಕ ಸ್ಥಾಪಿಲಸಲು ಆಯವ್ಯಯದಲ್ಲಿ ಸೇರಿಸಲಾಗಿದೆ. ಅದರಲ್ಲಿ ಒಂದು ನೂಲಿನ ಘಟಕವನ್ನು ಇಳಕಲ್ಲ ನಗರದಲ್ಲಿ ಅನುಷ್ಠಾನಗೊಳಿಸಲು ಸ್ಥಳೀಯ ಬಿಜೆಪಿ ಶಾಸಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

    ರಾಜ್ಯದಲ್ಲಿ ಇನ್ನೂ 1.24 ಲಕ್ಷ ರೈತರ ಸಾಲ ಮನ್ನಾ ಆಗಬೇಕು. ಅವರ ಸಾಲಮನ್ನಾ ಮಾಡಬೇಕು. ರೈತರ ಬೆಳೆಗಳನ್ನು ಬೆಂಬಲ ಬೆಲೆಯಡಿ ಖರಿದೀಸಲು ಕೇವಲ 10 ಕ್ವಿಂಟಾಲ್‌ಗೆ ನಿಗದಿಗೊಳಿಸಿದೆ. ಇದು ಬಿಜೆಪಿ ಸರ್ಕಾರ ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು.

    ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲರು ಆಯ್ಕೆಗೊಂಡು ಎರಡು ವರ್ಷಗಳ ಗತಿಸಿದರೂ ಕ್ಷೇತ್ರಕ್ಕೆ ಒಂದೇ ಒಂದು ಹೊಸ ಯೋಜನೆಯನ್ನು ತಂದಿಲ್ಲ. ಸಮಗ್ರ ನೀರಾವರಿ ಯೋಜನೆ ಜಾರಿ ಆಗಬೇಕಾಗಿದೆ. ನಂದವಾಡಗಿ, ಕಂದಗಲ್ಲ ಭಾಗದ ರೈತರು ನೀರಾವರಿ ಯೋಜನೆಯಿಂದ ವಂಚಿತಗೊಂಡಿದ್ದಾರೆ. ನಂದವಾಡಗಿ ಏತ ನೀರಾವರಿ ಯೋಜನೆ ಬಗ್ಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದಿಲ್ಲ. ಅಭಿವೃದ್ಧಿ ಸಲುವಾಗಿ ಜನ ಆರಿಸಿ ತಂದಿದ್ದಾರೆ ಎನ್ನುವ ಶಾಸಕರು ಅಭಿವೃದ್ಧಿಗೆ ಇವರ ಕೊಡುಗೆ ಏನು? ಎಂದು ಪ್ರಶ್ನಿಸಿದರು.

    ಹಿಂದಿನ ನಮ್ಮ ಸರ್ಕಾರದ ಯೋಜನೆಗಳಿಗೆ ಭೂಮಿಪೂಜೆ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಹನಿ ನೀರಾವರಿ ಯೋಜನೆ ಕಳಪೆಯಾಗಿದೆ ಎನ್ನುವವರು ಆ ಯೋಜನೆ ಸಂಪೂರ್ಣವಾಗಿ ಜಾರಿಯಾಗಿ ರೈತರಿಗೆ ಅರ್ಪಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ಜಿಪಂ ಮಾಜಿ ಸದಸ್ಯ ಮಹಾಂತೇಶ ನರಗುಂದ, ತಾಪಂ ಸದಸ್ಯ ಹುಲ್ಲಪ್ಪ ಹಲ್ಲೂರ ಇತರರು ಇದ್ದರು.

    ಭಾರತ ದೇಶದ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಲು ಎಸ್‌ಆರ್‌ಕೆ ಪ್ರತಿಷ್ಠಾನದ ವತಿಯಿಂದ ಮಾ. 10 ರಂದು ಇಳಕಲ್ಲ ನಗರದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬದ ನಿಮಿತ್ತ ಹಲವಾರು ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ.
    ವಿಜಯಾನಂದ ಕಾಶಪ್ಪನವರ ಅಧ್ಯಕ್ಷರು, ಎಸ್‌ಆರ್‌ಕೆ ಪ್ರತಿಷ್ಠಾನ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts