More

    ಹೂಗುಚ್ಛ ನೀಡಿ ಕರೊನಾ ಜಾಗೃತಿ

    ಇಳಕಲ್ಲ: ದಿನದಿಂದ ದಿನಕ್ಕೆ ಕರೊನಾ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಲಾಠಿ ಬಿಟ್ಟು ವಿನೂತನ ಕಾರ್ಯಕ್ಕೆ ಮುಂದಾಗಿದೆ.

    ಕರೊನಾ ತಡೆಗೆ ಸರ್ಕಾರ ಜಾರಿಗೆ ತಂದಿರುವ ಲಾಕ್‌ಡೌನ್ ಮೊದಲ ಎರಡು ದಿನ ರಸ್ತೆಗೆ ಇಳಿದ ಬೈಕ್ ಸವಾರರಿಗೆ ಲಾಠಿ ರುಚಿ ತೋರಿಸಿ ಬೈಕ್‌ಗಳನ್ನು ಸೀಜ್ ಮಾಡಿದ್ದರು.

    ಮೂರನೇ ದಿನ ಬುಧವಾರ ಬೆಳಗ್ಗೆ ಶಹರ ಪೊಲೀಸ್ ಠಾಣೆ ಪಿಎಸ್‌ಐ ಎಸ್.ಬಿ. ಪಾಟೀಲ ತಮ್ಮ ಸಿಬ್ಬಂದಿಯೊಂದಿಗೆ ಕಂಠಿ ವೃತ್ತ, ಮೇನ್ ಬಜಾರ್ ಸೇರಿ ವಿವಿಧೆಡೆ ರಸ್ತೆಗಿಳಿದ ಸಾರ್ವಜನಿಕರಿಗೆ ಮಾಸ್ಕ್, ಹೂಗುಚ್ಛ ನೀಡಿ ಕರೊನಾ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಮನೆಯಿಂದ ಯಾರೂ ಹೊರಗಡೆ ಬರಬಾರದು ಎಂದು ಕೈಮುಗಿದು ಮನವಿ ಮಾಡಿಕೊಂಡರು.

    ಬೀದಿ ಬದಿಯಲ್ಲಿ ಹಣ್ಣು, ತರಕಾರಿ ವ್ಯಾಪಾರ ಮಾಡುವವರಿಗೂ ಕೂಡ ಮಾಸ್ಕ್ ಹಾಗೂ ಹೂಗುಚ್ಛ ನೀಡಿ ದಯವಿಟ್ಟು ಒಂದೆಡೆ ನಿಂತು ವ್ಯಾಪಾರ ವಹಿವಾಟು ಮಾಡುವಂತ್ತಿಲ್ಲ. ತಳ್ಳುಗಾಡಿ ಮೂಲಕ ಪ್ರತಿ ಓಣಿ, ಬಡಾವಣೆಗಳಿಗೆ ತೆರಳಿ ವ್ಯಾಪಾರ ವಹಿವಾಟು ಮಾಡುವಂತೆ ಕೈಮುಗಿದು ಮನವಿ ಮಾಡಿದರು. ಪಿಎಸ್‌ಐ ಎಸ್.ಬಿ. ಪಾಟೀಲ ಕಾರ್ಯಕ್ಕೆ ಪ್ರಜ್ಞಾವಂತ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

    ಕರೊನಾ ತಡೆಗೆ ಸಾರ್ವಜನಿಕರ ಪಾತ್ರ ಮುಖ್ಯವಾಗಿದೆ. ಹೀಗಾಗಿ ಸಾರ್ವಜನಿಕರು, ವ್ಯಾಪಾರಸ್ಥರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಪಿಎಸ್‌ಐ ಪಾಟೀಲ ಹೇಳಿದರು.

    ಆತ್ಮಸ್ಥೈರ್ಯ ತುಂಬುತ್ತಿರುವ ಸರ್ವ ವಿಜಯ ಸೇವಾ ಸಂಸ್ಥೆ
    ಇಳಕಲ್ಲ ನಗರದಲ್ಲಿ ಹಾಗೂ ತಾಲೂಕಿನಲ್ಲಿ ಕರೊನಾಗೆ ಜನರು ಭಯ ಭೀತರಾಗುತ್ತಿದ್ದು, ಅವರಲ್ಲಿ ಸರ್ವ ವಿಜಯ ಸೇವಾ ಸಂಸ್ಥೆಯು ವೈದ್ಯರಿಂದ ಆತ್ಮಸ್ಥೈರ್ಯ ತುಂಬುತ್ತಿದೆ.

    ಸರ್ವ ವಿಜಯ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ರಾಜು ಬೋರಾ, ಅಧ್ಯಕ್ಷ ಸ್ವಪ್ನಿಲ್ ಬೋರಾ ಮಾರ್ಗದರ್ಶನದಲ್ಲಿ ಕಾರ್ಯದರ್ಶಿ ಹನುಮಂತ ಚುಂಜಾ ಹಾಗೂ ಪದಾಧಿಕಾರಿಗಳು ಸೇರಿಕೊಂಡು ಕರೊನಾ ಬರದಂತೆ ಮುಂಜಾಗ್ರತೆ ಕ್ರಮಗಳನ್ನು, ಒಂದು ವೇಳೆ ಬಂದರೆ ಅನುಸರಿಸಬೇಕಾದ ಚಿಕಿತ್ಸೆಗಳ ಬಗ್ಗೆ ತಜ್ಞ ವೈದ್ಯರ ಸಲಹೆ-ಸೂಚನೆಗಳನ್ನು ವಾಟ್ಸ್‌ಆ್ಯಪ್, ೇಸ್‌ಬುಕ್‌ಗಳಲ್ಲಿ ಹಾಕುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾರ್ಯ ಕಳೆದ ಎರಡು ದಿನಗಳಿಂದ ನಿರಂತರವಾಗಿ ನಡೆದಿದ್ದು ಸಾರ್ವಜನಿಕರಲ್ಲಿ ಸ್ವಲ್ಪ ನೆಮ್ಮದಿ ತಂದಿದೆ ಎಂದು ಕೆಲವರು ಹೇಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts