More

    ಈ ಸಂಸ್ಥೆಯಲ್ಲಿ ಈ ವರ್ಷ ತರಗತಿಗಳು ನಡೆಯಲ್ಲ…!

    ಮುಂಬೈ/ನವದೆಹಲಿ: ದೇಶದೆಲ್ಲೆಡೆ ಕರೊನಾ ಪಿಡುಗು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಸಾಮಾನ್ಯ ಕಾರ್ಯಾಚರಣೆಗೆ ತುಂಬಾ ಅಡ್ಡಿಯುಂಟಾಗುತ್ತಿದೆ. ವಿದ್ಯಾರ್ಥಿಗಳ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲವೊಂದು ಸಂಸ್ಥೆಗಳು ಈಗಾಗಲೆ ಆನ್​ಲೈನ್​ ತರಗತಿಗಳನ್ನು ಆರಂಭಿಸಿವೆ. ಆದರೆ, ಕರೊನಾ ಪಿಡುಗು ಕಡಿಮೆಯಾದ ಬಳಿಕ ತರಗತಿಗಳನ್ನು ಪುನರಾರಂಭಿಸುವ ಬಗ್ಗೆಯೂ ನಿರ್ಧರಿಸಿವೆ.

    ಆದರೆ, ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿ ಬೋಧನೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿದೆ. ಬುಧವಾರ ತಡರಾತ್ರಿ ಟ್ವಿಟರ್​ ಮೂಲಕ ಈ ನಿರ್ಧಾರವನ್ನು ಪ್ರಕಟಿಸಿರುವ ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ ಬಾಂಬೆ) ನಿರ್ದೇಶಕ ಪ್ರೊ. ಸುಭಾಶಿಶ್​ ಚೌಧರಿ, ಐಐಟಿ ಬಾಂಬೆಗೆ ವಿದ್ಯಾರ್ಥಿಗಳ ಸುರಕ್ಷತೆಯೇ ಮೊದಲ ಆದ್ಯತೆ. ಪ್ರಸಕ್ತ ಸೆಮಿಸ್ಟರ್​ ಅನ್ನು ಅಂತ್ಯಗೊಳಿಸುವುದು ಹೇಗೆ ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಸಿದೆವು. ಆದರೆ, ಪ್ರಸ್ತುತ ದೇಶದೆಲ್ಲೆಡೆ ಇರುವ ಕರೊನಾ ಪಿಡುಗನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ಸೆಮಿಸ್ಟರ್​ ಅನ್ನು ಹೇಗೆ ಆಯೋಜಿಸಬೇಕು ಎಂಬ ಬಗ್ಗೆ ಸೆನೆಟ್​ ಸಭೆಯಲ್ಲಿ ಚರ್ಚಿಸಿದೆವು. ಮುಂದಿನ ಸೆಮಿಸ್ಟರ್​ನ ಬೋಧನೆಯನ್ನು ಸಂಪೂರ್ಣವಾಗಿ ಆನ್​ಲೈನ್​ ಮೂಲಕವೇ ನಿರ್ವಹಿಸಲು ನಿರ್ಧರಿಸಿದೆವು. ತನ್ಮೂಲಕ ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಯಾವುದೇ ನ್ಯೂನತೆ ಆಗದಂತೆ ಎಚ್ಚರವಹಿಸಿದೆವು. ಹಾಗೂ ಇಂಥ ಒಂದು ನಿರ್ಧಾರ ಕೈಗೊಂಡ ರಾಷ್ಟ್ರದ ಮೊದಲ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರರಾದೆವು ಎಂದು ಹೇಳಿದ್ದಾರೆ.

    General information and a special request to all: For IIT Bombay, students are the first priority. We took the first…

    Posted by Director, IIT Bombay on Wednesday, June 24, 2020

    ನಮ್ಮ ಸಂಸ್ಥೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುವ ಹೆಚ್ಚಿನ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಆನ್​ಲೈನ್​ ತರಗತಿಯಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಅವರೆಲ್ಲರಿಗೂ ಲ್ಯಾಪ್​ಟಾಪ್​ ಮತ್ತಿತರ ಪೂರಕ ಉಪಕರಣಗಳು ಬೇಕಾಗುತ್ತವೆ. ಅವರೆಲ್ಲರಿಗೂ ಇವುಗಳನ್ನು ದೊರಕಿಸಿಕೊಡಲು ಕನಿಷ್ಠ 5 ಕೋಟಿ ರೂಪಾಯಿ ಅಗತ್ಯವಾಗಿದೆ. ಆದ್ದರಿಂದ, ಉಳ್ಳವರು ಕೈಯಲ್ಲಾದಷ್ಟು ದೇಣಿಗೆ ನೀಡಿ, ಅವರೆಲ್ಲರಿಗೂ ಲ್ಯಾಪ್​ಟಾಪ್​ ಮತ್ತು ಪೂರಕ ಉಪಕರಣಗಳನ್ನು ದೊರಕಿಸಿಕೊಡಲು ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

    ಆಡಿನ ತಂದೆ ಯಾರು ಎಂದು ತಿಳಿಯಲು ಕೋರ್ಟ್‌ ಮೊರೆ ಹೋಗಿರುವ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts