More

    ದೇವಿಗೆ ಶರಣಾದರೆ ಮನುಷ್ಯನ ಸಂಕಷ್ಟಗಳೆಲ್ಲ ದೂರ

    ಶಿರಾಳಕೊಪ್ಪ: ಕಾಳಿಕಾಂಬೆಯು ಮನುಷ್ಯರಿಗೆ ಮಾತ್ರ ಅನುಗ್ರಹ ನೀಡುವವಳಲ್ಲ, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರಿಗೂ ಶಕ್ತಿಯನ್ನು ಕರುಣಿಸಿದವಳು. ಮಾತೆಗೆ ನಾವು ಶರಣಾದಾಗ ನಮ್ಮ ಸಂಕಷ್ಟಗಳನ್ನು ದೂರಮಾಡುವ ಶಕ್ತಿ ಕಾಳಿಕಾದೇವಿಗೆ ಇದೆ ಎಂದು ಹಾಸನ ಜಿಲ್ಲೆ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನ ತೀಥರ್ ಸ್ವಾಮೀಜಿ ಹೇಳಿದರು.

    ಭಾನುವಾರ ಕಾಳಿಕಾಂಬಾ ವಿಶ್ವಕರ್ಮ ದೇವಸ್ಥಾನದ 13ನೇ ವಾರ್ಷಿಕೋತ್ಸವ ಹಾಗೂ ನೂತನ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಹಲವು ವಷರ್ಗಳ ಹಿಂದೆ ಸಮಿತಿಯವರು ದೇವಾಲಯದ ಶಂಕುಸ್ಥಾಪನೆ ಮಾಡಲು ಕರೆದಾಗ ಇದೊಂದು ಹಾಳುಬಿದ್ದ ಜಾಗವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ನಮ್ಮ ಸಮುದಾಯಕ್ಕೆ ಅಪಾರ ಸಹಕಾರ ನೀಡಿದ್ದಾರೆ. ರಾಜ್ಯದಲ್ಲಿ ಎಲ್ಲ ಸಮಾಜಗಳನ್ನು ಗುರುತಿಸಿ ಸಹಾಯ ಮಾಡಿದ್ದಾರೆ ಎಂದರು.
    ಇತ್ತೀಚೆಗೆ ರಾಜಕಾರಣಿಗಳು ಸಮಾರಂಭಕ್ಕೆ ಬಂದಾಗ ತಾವು ಮಾತನಾಡಿ ತಕ್ಷ್ಷಣ ಹೊರಟುಹೋಗುತ್ತಾರೆ. ಆದರೆ ರಾಘವೇಂದ್ರ ಅವರು ತಾಳ್ಮೆಯಿಂದ ಕಾರ್ಯಕ್ರಮದಲ್ಲಿ ಕುಳಿತಿದ್ದಾರೆ. ಇಂದು ಸಣ್ಣ ಪುಟ್ಟ ಸಮಾಜಗಳು ಸದೃಢವಾಗಿ ನಿಲ್ಲಲು ಅವರು ಕಾರಣರು. ತತ್ವ ಸಹಿತ ರಾಜಕಾರಣ ದೊರಕುತ್ತಿದ್ದರೆ ಅದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಎಂದು ಹೇಳಿದರು.
    ವಿರಕ್ತ ಮಠದ ಶ್ರೀ ಸಿದ್ದೇಶ್ವರ ದೇವರು ಮಾತನಾಡಿ, ದೇವಸ್ಥಾನ ಹೇಗೆ ಕಟ್ಟುತ್ತಾರೆ ಎಂಬಂತಿದ್ದ ಈ ಜಾಗದಲ್ಲಿ ಯಾವದೊಡ್ಡ ಸಮಾಜವೂ ಮಾಡದಂತಹ ಕಾರ್ಯವನ್ನು ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರ ಸಹಕಾರದಿಂದ ಮಾಡಲಾಗಿದೆ. ನಮ್ಮ ವೀರಕ್ತ ಮಠಕ್ಕೆ ನಾವು ಯಾವುದೇ ಸಹಾಯ ಕೇಳದಿದ್ದರೂ 75 ಲಕ್ಷ ರೂ. ನೆರವು ನೀಡಿ ಮಠದಲ್ಲಿ ಕಟ್ಟಡ ಕಟ್ಟಿಸಿಕೊಟ್ಟಿದ್ದಾರೆ. ಅವರ ಸಮಾಜಮುಖಿ ಕಾರ್ಯಕ್ಕೆ ಎಲ್ಲ ಗುರುಗಳ ಆಶೀರ್ವಾದ ಇರುತ್ತದೆ ಎಂದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ರಾಷ್ಟ್ರೀಯತೆ ವಿಷಯ ಬಂದಾಗ ವಿಶ್ವಕರ್ಮ ಸಮಾಜ ಮುಂಚೂಣಿಯಲ್ಲಿ ಇರುತ್ತದೆ. ಸಮಾಜದಿಂದ ಪಡೆದಿದ್ದನ್ನು ಮರಳಿ ಸಮಾಜಕ್ಕೇ ಕೊಡಲಾಗಿದೆ. ಸಮುದಾಯ ಭವನ ಸೌಲಭ್ಯ ಸಮಾಜದ ಎಲ್ಲ ವಗರ್ಕ್ಕೆ ದೊರಕುವಂತಾಗಲಿ. ಜನ ಅಪೇಕ್ಷೆ ಪಟ್ಟಾಗ ನಾವು ಸ್ಪಂದಿಸಬೇಕು. ಶಿರಾಳಕೊಪ್ಪ ಪಟ್ಟಣಕ್ಕೆ 32 ಕೋಟಿ ರೂ. ವೆಚ್ಚದಲ್ಲಿ ಶರಾವತಿ ನದಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
    ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್, ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಿರಂಜನಮೂರ್ತಿ, ಜಯಾನಂದ, ಮಲ್ಲಿಕಾರ್ಜುನ, ರಾಜಶೇಖರ ಗೌಡ, ನಿವೇದಿತಾ ರಾಜು, ಚೆನ್ನವೀರ ಶೆಟ್ಟಿ, ಚಂದ್ರಶೇಖರ, ಅರುಣ್‌ಕುಮಾರ್, ಡಾ. ಶ್ರೀನಾಥ್, ಡಾ. ಶಶಿಕಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts