More

    ವೃದ್ಧರ ಸೇವೆ ಮಾಡಿದ್ರೆ ಭಗವಂತನ ಅನುಗ್ರಹ ಪ್ರಾಪ್ತಿ

    ಮೂಡಿಗೆರೆ: ಬಡವರು, ವಯೋವೃದ್ಧರು ಹಾಗೂ ಶಿವಭಕ್ತರ ಸೇವೆ ಮಾಡುವುದರಿಂದ ಭಗವಂತನ ಅನುಗ್ರಹ ಹಾಗೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.

    ಪಟ್ಟಣದ ಹೊರ ವಲಯದ ನೀರಗಂಡಿಯಲ್ಲಿ 5 ದಿನ ಶಿವಭಕ್ತರಿಗೆ ಸಾರ್ವಜನಿಕ ಸೇವಾ ಸಮಿತಿಯಿಂದ ಹಮ್ಮಿಕೊಂಡಿರುವ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
    ಕೇದಾರನಾಥದಲ್ಲಿ ಪಾದಯಾತ್ರೆ ಮಾಡುವ ಭಕ್ತರಿಗೆ ಅಲ್ಲಿ ವಾಸಿಸುವ ಸಾಮಾನ್ಯ ವರ್ಗದ ಜನ ಊಟ, ತಂಪು ಪಾನೀಯ ಸೇರಿದಂತೆ ವಿವಿಧ ರೀತಿಯ ಸೇವೆ ಮಾಡುತ್ತಾರೆ. ಅದೇ ರೀತಿಯಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುವ ಭಕ್ತಿರಿಗೆ ಇಲ್ಲಿನ ಸಾತ್ವಿಕ ಮನಸ್ಸುಗಳು ಕಳೆದ 8 ವರ್ಷದಿಂದ ಸುಸಜ್ಜಿತ ವ್ಯವಸ್ಥೆ ಮಾಡುತ್ತಿರುವುದು ದೇವರ ಸೇವೆ ಮಾಡಿದಷ್ಟೇ ಪುಣ್ಯದ ಕೆಲಸ. ಎಲ್ಲರಿಗು ಪುಣ್ಯ ದೊರಕುತ್ತದೆ ಎಂದು ಹೇಳಿದರು.
    ಮಾನವ ಎಷ್ಟೇ ಶ್ರೀಮಂತನಾಗಿದ್ದರೂ ಹೃದಯ ಶ್ರೀಮಂತಿಕೆ ಇಲ್ಲದಿದ್ದರೆ ಆತನ ಶ್ರೀಮಂತಿಕೆಗೆ ಬೆಲೆ ಇಲ್ಲದಂತಾಗುತ್ತದೆ. ಮಾನವನ ಸೇವೆ ಮಾಡಿದಾಗ ಮಾಧವನ ಸೇವೆ ಮಾಡಿದಂತಹ ಪುಣ್ಯ ದೊರಕುತ್ತದೆ. ಅಂತಹ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿದಾಗ ದೇವರ ಅನುಗ್ರಮ ದೊರಕುತ್ತದೆ. ಎಲ್ಲ ಕಡೆ ಒಂದು ದಿನ ಶಿವರಾತ್ರಿ ಆಚರಣೆ ನಡೆಯುತ್ತದೆ. ಶಿವನಿಗೆ 5 ಮುಖವಿದ್ದಂತೆ ಇಲ್ಲಿ 5 ದಿನ ಶಿವರಾತ್ರಿ ಆಚರಣೆ ನಡೆಯುತ್ತದೆ. ಇಂತಹ ಮಹಾನ್ ಕಾರ್ಯ ನಿರಂತರವಾಗಿ ಮುಂದುವರೆಯಬೇಕು ಎಂದು ಹಾರೈಸಿದರು.
    ಶಾಸಕಿ ನಯನಾ ಮೋಟಮ್ಮ, ಸಮಿತಿ ಅಧ್ಯಕ್ಷ ಕೆ.ವೆಂಕಟೇಶ್, ಕಾರ್ಯದರ್ಶಿ ಮಂಚೇಗೌಡ, ಯೋಗೇಶ್, ಪ್ರವೀಣ್, ಅನಿಲ್, ಗೋಪಾಲ್ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts