More

    ಕೂಡಿ ಬಾಳಿದರೆ ಸ್ವರ್ಗಸುಖ

    ಮುಂಡರಗಿ: ಸಮಾಜದಲ್ಲಿ ಜಾತಿ ವ್ಯವಸ್ಥೆ ಹೆಚ್ಚು ಪ್ರಭಾವ ಬೀರುತ್ತಿದೆ. ಒಂದಾಗಿ ಬಾಳುವುದರಲ್ಲಿಯೇ ಸ್ವರ್ಗಸುಖ ಕಾಣುವ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.

    ತಾಲೂಕಿನ ಕಲಕೇರಿ ಗ್ರಾಮದ ಹಜರತ್ ಸೈಯದ್‌ಬಾಬಾ ದರ್ಗಾದ ಉರುಸ್ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

    ಕಲಕೇರಿ ಗ್ರಾಮವು ಭಾವೈಕ್ಯದ ಪ್ರತೀಕವಾಗಿದೆ. ಗ್ರಾಮದಲ್ಲಿ ಸರ್ವರು ಸೌಹಾರ್ದ ಹಾಗೂ ಸಹಬಾಳ್ವೆಯ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಸೂಫಿಗಳು, ಸಂತರು, ಶರಣರ ಪ್ರಭಾವವೇ ಕಾರಣವಾಗಿದೆ ಎಂದರು.

    ಶ್ರೀ ಮುದುಕೇಶ್ವರ ಶಿವಾಚಾರ್ಯರು, ಬೆಳಗಟ್ಟಿ ದರ್ಗಾದ ಮುಸ್ತಫಾ ಖಾದ್ರಿ ಸಾಹೇಬ್ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಎಸ್.ಡಿ. ಮಕಾಂದಾರ, ವಿ.ಎಲ್. ನಾಡಗೌಡ್ರ, ಅಧ್ಯಕ್ಷತೆ ವಹಿಸಿದ್ದ ದರ್ಗಾ ಕಮಿಟಿ ಅಧ್ಯಕ್ಷ ಎಂ.ಯು. ಮಕಾನದಾರ ಮಾತನಾಡಿದರು.

    ಶಿವಕುಮಾರಗೌಡ ಪಾಟೀಲ, ಚಂದ್ರಶೇಖರ ಜುಠಲ್, ನೂರಅಹ್ಮದ್ ಮಕಾಂದಾರ, ಮೆಹಬೂಬಸುಬ್ಹಾನಿ ಅಳವಂಡಿ, ಅಬ್ದಲಖಾದರ್‌ಜೀಲಾನಿ ಅಳವಂಡಿ ಅವರನ್ನು ಸನ್ಮಾನಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ದೀಪಾ ತಿಪ್ಪಾಪೂರ, ರಾಜು ದಾವಣಗೇರಿ, ಬಿ.ಕೆ.ದೇಸಾಯಿ, ಪೀರಸಾಬ್ ನದಾಫ್ ಇದ್ದರು. ಎ.ಕೆ. ಮುಲ್ಲಾನವರ, ಶಾಬುದ್ದೀನ್ ನದಾಫ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts