More

    ಧರ್ಮದಿಂದ ಜೀವಿಸಿದರೆ ಸುಖ ಪ್ರಾಪ್ತಿ

    ಸಿದ್ದಾಪುರ: ಜೀವನದಲ್ಲಿ ಸುಖ ಸಿಗಬೇಕಾದರೆ ನಾವು ಧರ್ಮದಿಂದ ಜೀವನ ನಡೆಸಬೇಕು. ಧರ್ಮ ಮತ್ತು ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

    ಪಟ್ಟಣದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಸಿದ್ದಾಪುರ ಉತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಯಾವುದೇ ಧರ್ಮ ಅಥವಾ ಧರ್ಮ ಗ್ರಂಥ ಜೀವಿಯನ್ನು ದ್ವೇಷಿಸಬೇಕು ಅಥವಾ ಹಿಂಸಿಸಬೇಕು ಎಂದು ಬೋಧಿಸುವುದಿಲ್ಲ. ಆದರೆ, ಮನುಷ್ಯ ಆ ಪ್ರವೃತ್ತಿ ಬೆಳೆಸಿಕೊಂಡಿರುವುದು ಅವನ ತಪ್ಪು ಗ್ರಹಿಕೆಯಿಂದ. ನಮ್ಮ ಧರ್ಮವನ್ನು ಪ್ರೀತಿಸುವುದರ ಜತೆಗೆ ಉಳಿದ ಧರ್ಮವನ್ನು ಗೌರವಿಸಬೇಕು ಎಂದರು.

    ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಿದ್ದಾಪುರದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸಲಾಗುವುದು. ಜನತೆ ನಮ್ಮ ಮೇಲಿಟ್ಟ ಭರವಸೆಯನ್ನು ಹುಸಿಯಾಗಿಸದೆ ಜನರೊಡನೆ ಒಂದಾಗಿ ಅವರ ಕಷ್ಟಸುಖಗಳನ್ನು ಅರಿತು ಅದನ್ನು ಪರಿಹರಿಸಲು ಸದಾ ಸಿದ್ಧನಿದ್ದೇನೆ ಎಂದರು.

    ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಶಿರಸಿ, ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಡಾ.ಕೆ. ಶ್ರೀಧರ ವೈದ್ಯ ಮಾತನಾಡಿದರು. ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಸತೀಶ ಹೆಗಡೆ, ವಿಜಯ ದಾಮೋದರ ಪ್ರಭು ಹಾಗೂ ಪಾದಾಧಿಕಾರಿಗಳಿದ್ದರು. ಸಿದ್ದಾಪುರ ಉತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ನೀಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 25 ಜನ ಸಾಧಕರನ್ನು ಸನ್ಮಾನಿಸಲಾಯಿತು. ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ಮಾತನಾಡಿದರು. ಸುಧಾರಾಣಿ ನಾಯ್ಕ ಹಾಗೂ ವೀರಭದ್ರ ನಾಯ್ಕ ಮಳವಳ್ಳಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts