More

    ಬಂದರೆ ಜತೆಗೆ, ಬಾರದಿದ್ರೆ ಬಿಟ್ಟು, ಅಡ್ಡ ಬಂದ್ರೆ ಮೆಟ್ಟಿ ಹೋಗ್ತೀವಿ !

    ಶಿವಮೊಗ್ಗ: ದೇಶದಲ್ಲಿ 370 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು ಅದರಲ್ಲಿ ಶಿವಮೊಗ್ಗ ಕ್ಷೇತ್ರವೂ ಇರಲಿದೆ. ಉಳಿದಂತೆ ಎನ್‌ಡಿಎ ಒಟ್ಟಾರೆ 400 ಸೀಟುಗಳನ್ನು ಗೆಲ್ಲಲಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ವಿಶ್ವಾಸ ವ್ಯಕ್ತಪಡಿಸಿದರು.

    ನಮ್ಮದು ವೀರ ಸಾವರ್ಕರ್ ಅವರ ನಡೆಯಾಗಿದ್ದು ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಐದಾರು ಮಾಜಿ ಪಾಲಿಕೆ ಸದಸ್ಯರಿದ್ದಾರೆ. ನಾಮಪತ್ರ ಸಲ್ಲಿಕೆವರೆಗೂ ಕಾಯುತ್ತೇವೆ. ಅದರಲ್ಲಿ ಕೆಲವರು ಬಿಜೆಪಿ ಜತೆ ಬರಲಿದ್ದಾರೆ. ಬಂದರೆ ಜತೆಯಲ್ಲಿ, ಬಾರದಿದ್ದರೆ ಬಿಟ್ಟು, ಅಡ್ಡ ಬಂದರೆ ಮೆಟ್ಟಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಬೆಂಬಲಿಗರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
    ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗಲಿದೆ ಎಂಬ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ತಿಯಿಸಿದ ಶಾಸಕರು, ಚುನಾವಣೆಯ ನಂತರ ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬರಲ್ಲ. ಆದರೆ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದರು.
    ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಗೆದ್ದು ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸುವುದಾಗಿ ಹೇಳಿದ್ದಾರೆ. ಅದು ಸಾಧ್ಯನಾ ?, ಬಿಜೆಪಿಯದ್ದು 370 ಸೀಟುಗಳ ಗುರಿ ಇದೆ. ಇದು ಬೇರೆಯವರ ಕರೆಯಲ್ಲ. ನಾವು ಮತಯಾಚಿಸುವುದಕ್ಕಿಂತ ಮುನ್ನವೇ ಪ್ರಧಾನಿ ಮೋದಿ, ಬಿಜೆಪಿ ಜನಮನದಲ್ಲಿ ನೆಲೆವೂರಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts