More

    ಮಹಿಳೆಯನ್ನು ಗೌರವಿಸಿದರೆ ದೇಶ ಸುಭಿಕ್ಷ

    ಭದ್ರಾವತಿ: ಒಂದು ಕುಟುಂಬದಲ್ಲಿ ಪುರುಷರು ಹಾಗೂ ಮಹಿಳೆಯರು ಗೌರವದಿಂದ ನಡೆದುಕೊಂಡರೆ ಮಾತ್ರ ಸಾಮರಸ್ಯ ನೆಲೆಸುತ್ತದೆ. ಮಹಿಳಾ ಸೌಲಭ್ಯಗಳು ಏಳಿಗೆಗೆ ಕಾರಣವಾಗಬೇಕೆ ಹೊರತು ಸ್ವೇಚ್ಛಾಚಾರಕ್ಕೆ ಕಾರಣವಾಗಬಾರದು ಎಂದು ಪೇಪರ್‌ಟೌನ್ ಪಿಎಸ್‌ಐ ಕೆ.ನಾಗಮ್ಮ ಹೇಳಿದರು.
    ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜದ ಸಭಾಂಗಣದಲ್ಲಿ ಬುಧವಾರ ಸಂಜೆ ಅಪರಂಜಿ ಅಭಿನಯ ಶಾಲೆ ಹಾಗೂ ಮಹಿಳಾ ಸೇವಾ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಸಾಂಸ್ಕÈತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ತೊಟ್ಟಿಲು ತೂಗುವ ಕೈಗಳು ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದು, ಅವರಿಗೆ ಕಾನೂನು ತಿಳಿವಳಿಕೆ ಮತ್ತು ಸ್ವರಕ್ಷಣೆಯ ಕುರಿತು ಅರಿವು ಮೂಡಿಸುವುದು ಅಗತ್ಯವಿದೆ ಎಂದರು.
    ಅಪರAಜಿ ಅಭಿನಯ ಶಾಲೆಯ ಅಧ್ಯಕ್ಷ ಅಪರಂಜಿ ಶಿವರಾಜ್ ಮಾತನಾಡಿ, ಹೆಣ್ಣು ಮಕ್ಕಳು ಸುಖ ಸಂತೋಷದಿAದಿದ್ದರೆ ಅಂತಹ ಕುಟುಂಬ ನೆಮ್ಮದಿಯಿಂದಿರುತ್ತದೆ. ಹೆಣ್ಣು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೊಂದು ವೇದಿಕೆ ಕಲ್ಪಿಸಲು ಮಹಿಳಾ ಸಾಂಸ್ಕÈತಿಕ ವೈಭವ ಆಯೋಜಿಸಲಾಗಿದೆ ಎಂದರು.
    ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ ರಾವ್, ಪ್ರಧಾನ ಕಾರ್ಯದರ್ಶಿ ಶೋಭಾ ಗಂಗರಾಜ್, ಖಜಾಂಚಿ ಜಯಂತಿ ನಾಗರಾಜ ಶೇಟ್, ಎಂ.ಅನುಸೂಯಾ, ಪ್ರಧಾನ ಕಾರ್ಯದರ್ಶಿ ಸಿ.ಎಚ್.ಪುಷ್ಪಲತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts