More

    ತಾಕತ್ತು ಇದ್ದರೆ ಪರಿಹಾರ ತರಲಿ: ಮಧು ಬಂಗಾರಪ್ಪ ಸವಾಲು

    ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿಯವರು ನಡೆಸುತ್ತಿರುವ ಬರ ಅಧ್ಯಯನ ವರದಿಯನ್ನು ಯಾರಿಗೆ ನೀಡುತ್ತಾರೆ ಎಂದು ಪ್ರಶ್ನಿಸಿದ ಸಚಿವ ಮಧು ಬಂಗಾರಪ್ಪ, ವರದಿಯನ್ನು ಕೇಂದ್ರಕ್ಕೆ ನೀಡಿ ಹಣ ತರುವ ತಾಕತ್ತು ಅವರಿಗಿಲ್ಲ ಎಂದು ಗೇಲಿ ಮಾಡಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿಗೆ 1,700 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರವನ್ನು ಕೇಳಿದೆ. ತ್ವರಿತವಾಗಿ ಎನ್‌ಡಿಆರ್‌ಎಫ್‌ನಡಿ ಪರಿಹಾರ ಮೊತ್ತ ಬಿಡುಗಡೆಗೆ ದೆಹಲಿಯಲ್ಲಿ ರಾಜ್ಯದ ಬಿಜೆಪಿ ಸಂಸದರು ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ತಾರತಮ್ಯ ಧೋರಣೆ ತೋರುತ್ತಿದೆ ಎಂದು ದೂರಿದರು.
    ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಲಿಕ್ಕೇ ಆರು ತಿಂಗಳು ತೆಗೆದುಕೊಂಡಿದ್ದಾರೆ. ಇನ್ನೂ ಸಮೀಕ್ಷೆ ಮಾಡಿ ಏನು ಮಾಡುತ್ತಾರೆ. ಕೇಂದ್ರ ಸರ್ಕಾರದಿಂದ ಹಣ ತರುತ್ತಾರಾ? ತಾಕತ್ತು ಇದ್ದರೆ ತರಲಿ ನೋಡೋಣ ಎಂದು ಸವಾಲು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts