More

    ಸಂವಿಧಾನ ಬದಲಾದರೆ ಎಲ್ಲರಿಗೂ ಅಪಾಯ: ಡಾ.ಯತೀಂದ್ರ ಸಿದ್ದರಾಮಯ್ಯ ಆತಂಕ

    ಮೈಸೂರು: ಭಾರತದ ಸಂವಿಧಾನ ಬದಲಾದರೆ ದಲಿತರು, ಅಲ್ಪಸಂಖ್ಯಾತರು ಮಾತ್ರವಲ್ಲದೇ ಎಲ್ಲರಿಗೂ ಅಪಾಯ. ಸಂವಿಧಾನ ಇಲ್ಲದಿದ್ದರೆ ಪ್ರಶ್ನೆ ಮಾಡುವುದನ್ನು ಕಳೆದುಕೊಳ್ಳುತ್ತೇವೆ. ಆಗ ಗುಲಾಮರಾಗಿ ಬದುಕಬೇಕಾಗುತ್ತದೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.


    ಕೆ.ಆರ್.ಮಿಲ್ ಕಾಲನಿಯಲ್ಲಿ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕೊಟ್ಟ ಮಾತನ್ನು ಈಡೇರಿಸಲಿಲ್ಲ. ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯವಲ್ಲ. ಅದೇ ನಿಮ್ಮದೇ ಹಣವನ್ನು ಮರಳಿ ನೀಡಲಾಗುತ್ತಿದೆ ಎಂದು ತಿಳಿಸಿದರು.
    ಜನಸಾಮಾನ್ಯರ ಬದುಕುವುದು ಕಷ್ಟವಾಗಿದೆ. ರೈತರು ಪ್ರತಿಭಟನೆ ಮಾಡಲು ಅವಕಾಶ ಇಲ್ಲವಾಗಿದೆ ಎಂದರು.


    ಬಿಜೆಪಿ ಶ್ರೀಮಂತರ ಜೇಬು ತುಂಬಿಸುವ ಪಕ್ಷ. ಪ್ರಜಾಪ್ರಭುತ್ವ ಇಲ್ಲದಂತೆ ಆಗಿದೆ. ಮೋದಿ ಸರ್ಕಾರದ ವಿರುದ್ಧ ಯಾರೇ ಮಾತಾಡಿದರೂ ಜೈಲಿಗೆ ಹಾಕಲಾಗುತ್ತಿದೆ. ಭ್ರಷ್ಟಾಚಾರದ ಆರೋಪ ಇದ್ದ ಪ್ರತಿಪಕ್ಷ ನಾಯಕರು ಬಿಜೆಪಿ ಸೇರಿದರೆ ಆರೋಪದಿಂದ ಮುಕ್ತರಾಗುತ್ತಿದ್ದಾರೆ ಎಂದು ಹೇಳಿದರು.


    ನವದೆಹಲಿ, ಜಾರ್ಖಂಡ್ ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಲಾಗಿದೆ. ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ನಿರಂತರವಾಗಿ ಪ್ರತಿಪಕ್ಷಗಳ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕಿಡಿಕಾರಿದರು.


    ರಾಜ್ಯದ ಪರವಾಗಿ ಧ್ವನಿ ಎತ್ತದ 26 ಸಂಸದರು ವಂದಿಮಾಗಧರಂತೆ ಇದ್ದಾರೆ. ಮೋದಿ ಹೆಸರಲ್ಲಿ ಮತ ಪಡೆಯುವರಿಗೆ ಸ್ವಂತ ಅರ್ಹತೆ, ಯೋಗ್ಯತೆ ಇಲ್ಲವಾಗಿದೆ. ಮತ ಕೊಟ್ಟ ಜನರಿಗೆ ಅನ್ಯಾಯವಾದರೂ ಬಾಯಿ ಮುಚ್ಚಿಕೊಂಡು ಇದ್ದಾರೆ ಎಂದು ಟೀಕಿಸಿದರು.

    ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಸುಶಿಕ್ಷಿತರು. ಯಾರಿಗೂ ಸಲಾಂ ಹೊಡೆಯದವರು. ಜನಸಾಮಾನ್ಯರ ನಡುವೆ ಇರುವವರು. ಬಿಜೆಪಿ ಅಭ್ಯರ್ಥಿಯಂತೆ ಅರಮನೆಯ ದಂತಗೋಪುರದಲ್ಲಿ ಬೆಳೆದವರಲ್ಲ. ಸಾಮಾನ್ಯ ಕಾರ್ಯಕರ್ತರಾದ ಲಕ್ಷ್ಮಣ್ ಅವರಿಗೆ ಮತ ಕೊಟ್ಟು ಆಶೀರ್ವಾದ ಮಾಡುವಂತೆ ಕೋರಿದರು.


    ಜಿಪಂ ಮಾಜಿ ಸದಸ್ಯ ಮಾಜಿ ಬೀರಿಹುಂಡಿ ಬಸವಣ್ಣ, ಮುಖಂಡರಾದ ಉಮಾ ಶಂಕರ್, ರಾಕೇಶ್ ಪಾಪಣ್ಣ, ಕೆಂಪ ನಾಯಕ, ಲೇಖಾ ಸುರೇಶ್, ಸತೀಶ್, ಮಲ್ಲೇಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts