More

    ವರ್ಷಪೂರ್ತಿ ಜಂಗಲ್ ಕಟಿಂಗ್ ಮಾಡಿದ್ರೆ ವಿದ್ಯುತ್ ಕೊಡುವುದು ಯಾವಾಗ?

    ಕೊಪ್ಪ: ಕಲ್ಲುಗುಡ್ಡೆ, ಗಣಪತಿಕಟ್ಟೆ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ. ಪ್ರಶ್ನಿಸಿದರೆ ಜಂಗಲ್ ಕಟಿಂಗ್ ನಡೆಯುತ್ತಿದೆ ಎಂದು ಹೇಳುತ್ತೀರಿ. ವರ್ಷವಿಡೀ ಜಂಗಲ್ ಕಟಿಂಗ್ ಮಾಡುವುದಾದರೆ ನಮ್ಮ ಭಾಗಕ್ಕೆ ವಿದ್ಯುತ್ ಬೇಡ. ಮಕ್ಕಳಿಗೆ ಓದಿಕೊಳ್ಳಲು ಬೆಳಕಿನ ವ್ಯವಸ್ಥೆ ಇಲ್ಲ. 2 ಲೀಟರ್ ಸೀಮೆಎಣ್ಣೆ ಕೊಡಿ ಎಂದು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹರಿಹಾಯ್ದರು.
    ಪುರಭವನದಲ್ಲಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ವಿದ್ಯುತ್ ಕಡಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
    ಕಲ್ಲುಗುಡ್ಡೆ, ಹಾಲುಗೋಡು, ಮೆಣಸಿನಹಾಡ್ಯ ಭಾಗದಲ್ಲಿ ಜಂಗಲ್ ಕಟಿಂಗ್ ಆಗಿಲ್ಲ, ವಿದ್ಯುತ್ ಸಮಸ್ಯೆಯಿದೆ ಎಂದು ಗ್ರಾಮಸ್ಥರಾದ ರಜಿತ್, ವಸಂತ್, ಸತೀಶ್ ಹೇಳಿದರು.
    ಭುವನಕೋಟೆ ಗ್ರಾಪಂ ಸದಸ್ಯ ಶ್ರೀಕಾಂತ್ ಮಾತನಾಡಿ, ಹುರುಳಿಹಕ್ಲು ಎಂಬಲ್ಲಿ 75 ವಷರ್ಗಳಿಂದ ಇರುವ ಮರದ ವಿದ್ಯುತ್ ಕಂಬವನ್ನು ತೆರವುಗೊಳಿಸಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ಷೇಪಿಸಿದರು.
    ಕೆಸವೆ ರಾಮಪ್ಪ ಮಾತನಾಡಿ, ಕೆಸವೆಯಿಂದ ಸಿದ್ದರಮಠದವರೆಗಿನ ಹಳೆಯ ತಂತಿಗಳನ್ನು ಬದಲಾಯಿಸಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಎಇ ಶಶಿಕಾಂತ್ ರಾಥೋಡ್, 3.6 ಲಕ್ಷ ರೂಪಾಯಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಸಿದ್ದರಮಠ, ಗುಣವಂತೆ ಪ್ರತ್ಯೇಕ ಲಿಂಕ್‌ಲೈನ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.
    ಅಂಬಳಿಕೆಯ ಅಭಿಷೇಕ್ ಮಾತನಾಡಿ, ನನ್ನ ಮನೆ ಪಕ್ಕದಲ್ಲಿ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ ಅಪಾಯದ ಸ್ಥಿತಿಯಲ್ಲಿವೆ. ಅದನ್ನು ಸ್ಥಳಾಂತರಿಸಿ ಎಂದು ಮೆಸ್ಕಾಂ ಜೆಇ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಸಿದೆ ಎಇ ಸೋಮಶೇಖರ್, ಒಮ್ಮೆ ಅಳವಡಿಸಿದ ವಿದ್ಯುತ್ ಲೈನ್ ಸ್ಥಳಾಂತರಿಸಲು ಅವಕಾಶವಿಲ್ಲ. ಶಿಫ್ಟಿಂಗ್ ಚಾರ್ಜ್ ನೀಡಿದರೆ ಸ್ಥಳಾಂತರಿಸಬಹುದು ಎಂದು ತಿಳಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts