More

    ನನಗೆ ಮರಣದಂಡನೆ ಶಿಕ್ಷೆಯಾದರೆ ಖುಷಿಯಿಂದ ನೇಣುಗಂಬ ಏರುವೆ

    ನವದೆಹಲಿ: ತಮ್ಮ ವಿರುದ್ಧ ನಡೆಯುತ್ತಿರುವ 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯಲ್ಲಿ ತೀರ್ಪು ಏನೇ ಬಂದರೂ ಅದನ್ನು ಸ್ವೀಕರಿಸಿ ಮುನ್ನೆಡೆಯುವುದಾಗಿ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಹೇಳಿದ್ದಾರೆ.

    ತಮ್ಮ ಹೇಳಿಕೆ ದಾಖಲಿಸಲು ಕೋರ್ಟ್​ ನೀಡಿದ್ದ ಸೂಚನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಹಿರಿಯ ನಾಯಕರಾದ ಎಲ್​.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್​ ಜೋಷಿ ಅವರಂತೆ ನನಗೂ ಹೇಳಿಕೆ ದಾಖಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ನಾನು ಸತ್ಯ ಏನಿದೆಯೋ ಅದನ್ನು ಕೋರ್ಟ್​ಗೆ ತಿಳಿಸಿದ್ದೇನೆ. ತೀರ್ಪು ಏನೇ ಬರಲಿ ಅದನ್ನು ಸ್ವಾಗತಿಸುತ್ತೇನೆ. ನನಗೆ ಮರಣದಂಡನೆ ಶಿಕ್ಷೆಯಾದರೆ ಸಂತೋಷದಿಂದ ನೇಣುಗಂಬ ಏರುತ್ತೇನೆ ಎಂದು ಹೇಳಿದರು.

    ಇದಕ್ಕೂ ಮುನ್ನ ಜುಲೈ ತಿಂಗಳ ಆರಂಭದಲ್ಲಿ ಉಮಾ ಭಾರತಿ ಅವರು ಲಖನೌನಲ್ಲಿರುವ ಸಿಬಿಐನ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಬಿಜೆಪಿಯ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಕೋರ್ಟ್​ಗೆ ಹಾಜರಾಗಿದ್ದರೆ, ಮುರಳಿ ಮನೋಹರ್​ ಜೋಷಿ ಅವರು ಗುರುವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು.

    ಚೀನಾ ಸೇನೆ ಹಿನ್ನೆಲೆ ಇದ್ದರೂ ಅಮೆರಿಕದಲ್ಲಿ ಸಂಶೋಧನೆ; ಮಾಹಿತಿ ಬಚ್ಚಿಟ್ಟಿದ್ದಕ್ಕೆ ಮೂವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts