More

    ಕೇಂದ್ರದಲ್ಲಿ ಬಿಜೆಪಿ ಮತ್ತೆ ಚುಕ್ಕಾಣಿ ಹಿಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನ: ಕೋಟ ಶ್ರೀನಿವಾಸ್ ಪೂಜಾರಿ

    ಮೂಡಿಗೆರೆ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಯನ್ನು ಬಲ ಪಡಿಸುವ ಮೂಲಕ ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದೇ ನಮ್ಮ ಗುರಿಯಾಗಬೇಕು ಎಂದು ಬಿಜೆಪಿಯ ನಿಯೋಜಿತ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಶನಿವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದರು.
    ಚೀನಾ ಸೇರಿದಂತೆ ಯಾವುದೇ ತಂಟೆಕೋರ ದೇಶಗಳಿಗೆ ಬುದ್ಧಿ ಕಲಿಸಲು ಮೋದಿ ಅವರಿಂದ ಮಾತ್ರ ಸಾಧ್ಯ. ರಾಷ್ಟ್ರ ಕಟ್ಟುವ ಪ್ರಧಾನಿ ಕಾರ್ಯದಲ್ಲಿ ಸಂಸದನಾದ ಮೇಲೆ ಅವರಿಗೆ ಹೆಗಲಾಗಿ ಕ್ಷೇತ್ರ ಕಲ್ಯಾಣ ಮಾಡುವುದೇ ನನ್ನ ಗುರಿ. ನಾನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದಾಗ 38 ಸಾವಿರ ಕೋಟಿ ರೂ. ಅನುದಾನ ವಿನಿಯೋಗಿಸಿದ್ದೇನೆ. ಒಂದು ರೂಪಾಯಿ ಲಂಚ ಪಡೆದಿಲ್ಲ. ರಾಜ್ಯ, ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವುದು ನನ್ನ ಗುರಿ. ಪಾಕಿಸ್ತಾನದ ಪರ ವಹಿಸಿ ಭ್ರಷ್ಟಾಚಾರ ನಡೆಸುತ್ತಿರುವುದು. ಕೋಮು ಪರ ಸುಳ್ಳನ್ನೆ ಸತ್ಯ ಮಾಡುತ್ತಿರುವ ರಾಜ್ಯ ಸರ್ಕಾರ ತನ್ನ ಬೊಕ್ಕಸವನ್ನು ಖಾಲಿ ಮಾಡಿ ರಾಜ್ಯದ ಜನರನ್ನು ದಿವಾಳಿ ಮಾಡುವ ಮೂಲಕ ವ್ಯವಸ್ಥೆಯನ್ನು ಅದೋಗತಿಗೆ ತಂದಿದೆ ಎಂದು ದೂರಿದರು.
    ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ನಮ್ಮ ಅಭ್ಯರ್ಥಿ ಬಡವರ ಪರವಾದ ಭ್ರಷ್ಟಾಚಾರ ಮುಕ್ತ ತತ್ವ ಸಿದ್ಧಾಂತಗಳಿಗೆ ಬದ್ಧವಾದ ವ್ಯಕ್ತಿ, ಎಲ್ಲರಿಗೂ ಸಲ್ಲುವವರಾಗಿದ್ದು ಅವರನ್ನು ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ಗೆಲ್ಲಿಸಬೇಕಾಗಿದೆ. ಕೇಂದ್ರ ಸರ್ಕಾರ ಬಡವರ ಮನೆಗೆ ಉಚಿತ ಗ್ಯಾಸ್ ಸೌಲಭ್ಯ, ಸರ್ವ ಶಿಕ್ಷಣ ಅಭಿಯಾನದ ಮೂಲಕ ಶಿಕ್ಷಣ, ಸರ್ವ ಋತು ರಸ್ತೆ ಇವೆಲ್ಲವನ್ನೂ ನೀಡಿದೆ ಎಂದು ಹೇಳಿದರು.
    ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ವಿಶ್ವಾಸಮತ ಗಳಿಸುವ ವೇಳೆ 13 ದಿನದಲ್ಲಿ ಸೋತು ಹೋಯಿತು. ಇದನ್ನು ನಾವು ನೆನಪಿನಲ್ಲಿಟ್ಟುಕೊಂಡರೆ ಪ್ರತಿಯೊಂದು ಮತಕ್ಕೂ ಇರುವ ಗೌರವ ತಿಳಿಯುತ್ತದೆ. ಮತ್ತೊಮ್ಮೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವಿಶ್ವದಲ್ಲೆ ಭಾರತ ಬಲಿಷ್ಠವಾಗಿ ನಿರ್ಮಾಣವಾಗುತ್ತದೆ. ದೇಶದ 140 ಕೋಟಿ ಜನರನ್ನು ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಪರಿವಾರ ಎಂದಿದ್ದಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
    ಬಿಜೆಪಿ ಜಿಲ್ಲಾದ್ಯಕ್ಷ ದೇವರಾಜ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಕಲ್ಮರಡಪ್ಪ, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಾಜಪ್ಪ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ರಘು, ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ಎಂ.ಆರ್.ಜಗದೀಶ್, ಡಿ.ಎಸ್.ಸುರೇಂದ್ರ, ಬಿಜೆಪಿ ಚುನಾವಣಾ ಉಸ್ತುವಾರಿ ರಾಜಶೇಖರ್, ಸುದರ್ಶನ್, ಸಂತೋಷ್ ಕೋಟ್ಯಾನ್, ದೀಪಕ್ ದೊಡ್ಡಯ್ಯ, ಪ್ರಮೋದ್, ಪ್ರಶಾಂತ್, ದನಿಕ್, ವಿನಯ್ ಇತರದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts