More

  ಜೆಎನ್​ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು 26/11ರ ಮುಂಬೈ ಉಗ್ರದಾಳಿಗೆ ಹೋಲಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ

  ಮುಂಬೈ: ದೆಹಲಿಯ ಜವಾಹರ್ ಲಾಲ್​ ನೆಹರು (ಜೆಎನ್​ಯು) ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ದಾಳಿ, ಹಿಂಸಾಚಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು 2008ರ ನವೆಂಬರ್​ 26ರಂದು ಮುಂಬೈ (26/11ರ ದಾಳಿ) ಮೇಲೆ ನಡೆದ ಉಗ್ರರ ದಾಳಿಗೆ ಹೋಲಿಸಿದ್ದಾರೆ.

  ಜೆಎನ್​ಯು ವಿದ್ಯಾರ್ಥಿಗ ಮೇಲೆ ನಡೆದ ದಾಳಿ 26/11 ರ ಉಗ್ರದಾಳಿಯನ್ನು ನೆನಪಿಸುವಂತಿದೆ. ಜೆಎನ್​ಯುದಲ್ಲಿ ನಡೆದಂತಹ ಯಾವುದೇ ಘಟನೆ ಮಹಾರಾಷ್ಟ್ರದಲ್ಲಿ ನಡೆಯಲು ನಾನು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ದೇಶದ ವಿದ್ಯಾರ್ಥಿಗಳು ಅಸುರಕ್ಷಿತ ಭಾವದಲ್ಲೇ ಬದುಕುವಂತಾಗಿದೆ ಎಂದು ಮಾಧ್ಯಮಗಳ ಎದುರು ಉದ್ಧವ್​ ಠಾಕ್ರೆ ಹೇಳಿದ್ದಾರೆ.

  ಮುಸುಕು ಧರಿಸಿ ಜೆಎನ್​ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು  ಹೇಡಿಗಳು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೊದಲು ಅವರ ಮುಖವನ್ನು ದೇಶಕ್ಕೆ ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.

  ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಲು ಬಿಡುವುದಿಲ್ಲ. ಅಗತ್ಯಬಿದ್ದರೆ ರಾಜ್ಯದಲ್ಲಿ ಭದ್ರತಾ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts