More

    ವಧುವಿನ ತಂದೆಯ 11 ಲಕ್ಷ ರೂ. ವರದಕ್ಷಿಣೆ ನಿರಾಕರಿಸಿ ವರನ ತಂದೆ ಹೇಳಿದ ಮಾತಿಗೆ ಭಾರಿ ಮೆಚ್ಚುಗೆ!

    ಜೈಪುರ: ಪ್ರಸ್ತುತ ಸಮಾಜದಲ್ಲಿ ವರದಕ್ಷಿಣೆ ಎಂಬುದು ಅತಿರೇಕವಾಗಿದೆ. ವರದಕ್ಷಿಣೆಯ ದಾಹಕ್ಕೆ ಅನೇಕ ಜೀವಗಳು ಸಹ ಬಲಿಯಾಗಿವೆ. ಹೀಗಿರುವಾಗ ವರದಕ್ಷಿಣೆ ಬೇಡ ಎನ್ನುವವರು ಈ ಸಮಾಜದಲ್ಲಿ ಎಲ್ಲರಿಗೂ ಮಾದರಿಯೇ ಸರಿ. ಅಂಥದ್ದೆ ಮಾದರಿ ಮದುವೆಯೊಂದು ರಾಜಸ್ಥಾನದಲ್ಲಿ ನಡೆದಿದೆ.

    ವಿನೂತನ ಮದುವೆಗೆ ರಾಜಸ್ಥಾನದ ಬಂದಿ ಜಿಲ್ಲೆ ಸಾಕ್ಷಿಯಾಗಿದೆ. ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಬ್ರಾಜ್​ ಮೋಹನ್​ ಮೀನ ಅವರು ತನ್ನ ಮಗನಿಗೆ ಟೊಂಕಾ ಜಿಲ್ಲೆಯ ಗ್ರಾಮದ ನಿವಾಸಿ ಆರ್ತಿ ಮೀನಾ ಎಂಬ ಯುವತಿ ಜತೆ ಮದುವೆ ನಿಶ್ಚಯಿಸಿದ್ದರು. ಆರ್ತಿ ಬಿಎಸ್ಸಿ ಮುಗಿಸಿ ಬಿಇಡಿ ಅಧ್ಯಯನ ಮಾಡುತ್ತಿದ್ದಾರೆ.

    ಇದನ್ನೂ ಓದಿರಿ: ರೆಸಾರ್ಟ್​ಗೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ… ಉರುಳುತ್ತಾ ಮತ್ತೊಂದು ರಾಜಕೀಯ ದಾಳ?

    ನಿಶ್ಚಯದಂತೆ ಮದುವೆ ನಡೆಯುವಾಗ ವಧುವಿನ ತಂದೆ ಒಂದು ತಟ್ಟೆಯಲ್ಲಿ ನೋಟಿನ ಕಂತೆಗಳನ್ನು ಇಟ್ಟು ವರನ ತಂದೆ ಕೈಗೆ ಕೊಡಲು ಬಂದರು. ಆದರೆ, ವರದಕ್ಷಿಣೆಯನ್ನು ನಯವಾಗಿ ತಿರಸ್ಕರಿಸಿದ ವರನ ತಂದೆ, ನಿಮ್ಮ ಮಗಳೇ ನಮಗೆ ಸಾಕು ಎಂದರು. ಬರೋಬ್ಬರಿ 11 ಲಕ್ಷ ರೂ. ವರದಕ್ಷಿಣೆಯನ್ನು ನಿರಾಕರಿಸಿ ಸಾಂಪ್ರದಾಯಿಕವಾಗಿ ಕೇವಲ 101 ರೂ. ಅನ್ನು ವರನ ತಂದೆ ವಧುವಿನ ತಂದೆಯಿಂದ ಸ್ವೀಕರಿಸಿದರು.

    ಈ ಅಮೃತ ಉತ್ತಮ ಕ್ಷಣಗಳಿಗೆ ಸಾಕ್ಷಿಯಾದ ವಧು ಆರ್ತಿ ಮದುವೆ ಮಂಟಪದಲ್ಲೇ ಸಂತಸ ವ್ಯಕ್ತಪಡಿಸುತ್ತಾ ನಿಜಕ್ಕೂ ನಾನು ಅದೃಷ್ಟಶಾಲಿ ಎಂದರು. ಇದೇ ರೀತಿ ಪ್ರತಿಯೊಬ್ಬರು ಮಾನವೀಯತೆ ಮೆರೆದು ವರದಕ್ಷಿಣೆಯನ್ನು ತ್ಯಜಿಸಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸ್ಪೋಟಕ ತುಂಬಿದ ಕಾರ್ ಪತ್ತೆ: ‘ಇದು ಟ್ರೈಲರ್ ಮಾತ್ರ, ಸಿನಿಮಾ ಬಾಕಿ ಇದೆ’ ಎಂದು ಅಂಬಾನಿಗೆ ಬೆದರಿಕೆ!

    ಮದುವೆ ಮಂಟಪವಾಗಿ ಬದಲಾದ ಜೈಲು! ವಿಚಾರಣಾಧೀನ ಖೈದಿಯ ವಧು ಯಾರು ಗೊತ್ತೆ?

    ಮಂಗಳೂರು-ಚೆನ್ನೈ ರೈಲಿನಲ್ಲಿ ಅಪಾರ ಪ್ರಮಾಣದ ಸ್ಪೋಟಕಗಳು ಪತ್ತೆ! ಮಹಿಳೆ ಮಾಡಿದ ಕರಾಮತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts