More

    ಐಸಿಎಸ್​ಇ 10ನೇ ತರಗತಿ ಮತ್ತು ಐಎಸ್​ಸಿ 12ನೇ ತರಗತಿ ರಿಸಲ್ಟ್ ಪ್ರಕಟ

    ನವದೆಹಲಿ: ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್​ (ಸಿಐಎಸ್​ಸಿಐ) ಐಸಿಎಸ್​ಇ 10ನೇ ತರಗತಿ ಮತ್ತು ಐಎಸ್​ಸಿ 12ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದೆ.

    ದೇಶದಲ್ಲಿ ಕರೊನಾ ಸೋಂಕಿನ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಎರಡೂ ತರಗತಿಗಳ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಇದೀಗ ಪರ್ಯಾಯ ಮೌಲ್ಯಮಾಪನ ನೀತಿಯ ಆಧಾರದ ಮೇಲೆ ಫಲಿತಾಂಶವನ್ನು ಸಿದ್ಧಪಡಿಸಿ, ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು cisce.org ಅಥವಾ results.cisce.org. ವೆಬ್​ಸೈಟ್​ನಲ್ಲಿ ನೋಡಬಹುದಾಗಿದೆ.

    ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಐಸಿಎಸ್‌ಇ ಮತ್ತು ಐಎಸ್‌ಸಿ ಫಲಿತಾಂಶ ನೀಡಲಾಗಿದೆ. ಈ ವರ್ಷ ಉತ್ತರ ಪತ್ರಿಕೆಗಳನ್ನು ಮರುಪರಿಶೀಲಿಸುವ ಆಯ್ಕೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಇಂಪ್ಯೂಟೆಡ್ ಮಾರ್ಕ್ಸ್ ನೀಡಿರುವುದರಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂಕಗಳಲ್ಲಿ ವ್ಯತ್ಯಾಸವಿದ್ದರೆ ಅದನ್ನು ಸರಿಪಡಿಸುವ ಅವಕಾಶವಿದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರಾಥೂನ್ ತಿಳಿಸಿದ್ದಾರೆ.

    ಒಂದು ವೇಳೆ ವಿದ್ಯಾರ್ಥಿಗಳು ಫಲಿತಾಂಶದ ಬಗ್ಗೆ ಆಕ್ಷೇಪ ಹೊಂದಿದ್ದರೆ, ಅವರು ಲಿಖಿತವಾಗಿ ಆಯಾ ಶಾಲೆಗಳಲ್ಲಿ ಅರ್ಜಿ ಸಲ್ಲಿಸಬಹುದು. ಅವರ ದೂರು ಮತ್ತು ಅದಕ್ಕೆ ಕಾರಣವನ್ನು ವಿವರವಾಗಿ ತಿಳಿಸಲಬಹುದು ಎಂದು ತಿಳಿಸಲಾಗಿದೆ. ಆ ವಿದ್ಯಾರ್ಥಿಯ ಅಂಕವನ್ನು ಬದಲಿಸಲು ಸಿಐಎಸ್​ಸಿಐ ನಿರ್ಧರಿಸಿದರೆ ಅದು ಸಂಬಂಧಪಟ್ಟ ಶಾಲೆಯ ಮುಖ್ಯಸ್ಥರಿಗೆ ತಿಳಿಸುತ್ತದೆ ಎನ್ನಲಾಗಿದೆ. (ಏಜೆನ್ಸೀಸ್)

    ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ನಾಲ್ವರು ಮಕ್ಕಳು ಸೇರಿ ಒಂಬತ್ತು ಮಂದಿ ಮೃತ

    ‘ನನ್ನ ಗಂಡ ಅಶ್ಲೀಲ ವಿಡಿಯೋ ಹಾಕುತ್ತಿರಲಿಲ್ಲ, ಶೃಂಗಾರದ ವಿಡಿಯೋ ಚಿತ್ರೀಕರಿಸ್ತಿದ್ರು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts