More

    ರಸ್ತೆ ವಿಸ್ತರಣೆ ನಂತರವೇ ಮತ ಕೇಳುತ್ತೇನೆ

    ಬ್ಯಾಡಗಿ: ದಶಕಗಳಿಂದ ನನೆಗುದಿಗೆ ಬಿದ್ದಿರುವ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಮಾಡಿಯೇ ಜನರ ಬಳಿ ಮತಕೇಳಲು ಬರುತ್ತೇನೆ. ಸಾರ್ವಜನಿಕರಿಗೆ ರಸ್ತೆ ಕಾಮಗಾರಿ ಕುರಿತು ಅನುಮಾನ ಬೇಡ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸ್ಟಷ್ಟಪಡಿಸಿದರು.

    ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ಕಸ ತುಂಬುವ ಹೊಸ ವಾಹನಗಳಿಗೆ ಚಾಲನೆ, ನಿರಾಶ್ರಿತರಿಗೆ ಮನೆ ನಿರ್ವಣದ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

    13 ವರ್ಷಗಳಿಂದ ಸ್ಥಳೀಯ ಜನರು ಮುಖ್ಯರಸ್ತೆ ವಿಸ್ತರಣೆಗೆ ಹೋರಾಟ ಮಾಡುತ್ತಿದ್ದಾರೆ. ನಾನೂ ಹೋರಾಟದಲ್ಲಿ ಪಾಲ್ಗೊಂಡಿದ್ದೆ. ಶಾಸಕನಾದ ಮೇಲೆ ರಸ್ತೆ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದ್ದೆ. ಹೀಗಾಗಿ ಯಾವುದೇ ಕಾರಣಕ್ಕೆ ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಿ ಮುಂಬರುವ ಚುನಾವಣೆಯಲ್ಲಿ ಮತಕೇಳಲು ಜನರ ಬಳಿ ಬರುತ್ತೇನೆ ಎಂದು ಖಡಕ್ಕಾಗಿ ಹೇಳಿ, ಹಲವು ದಿನಗಳಿಂದ ಇದ್ದ ಊಹಾಪೋಹಗಳಿಗೆ ತೆರೆ ಎಳೆದರು.

    ಹಿಂದಿನ ಶಾಸಕರು ತಮ್ಮ ಐದು ವರ್ಷದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಕೇವಲ 5 ಕೋ.ರೂ. ಅನುದಾನ ತಂದಿದ್ದಾರೆ. ನಾನು 52 ಕೋ.ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ಅವರು 200 ಮನೆಗಳನ್ನು ಮಂಜೂರು ಮಾಡಿಸಿದ್ದರೆ, ನಾನು ಮುಖ್ಯಮಂತ್ರಿಗಳ ಹಾಗೂ ವಸತಿ ಸಚಿವರ ಸಹಕಾರದಿಂದ 1055 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ. ಮಾದರಿ ಪಟ್ಟಣ ಮಾಡಲು ಪುರಸಭೆ ಸದಸ್ಯರು, ಮುಖ್ಯಾಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದರು.

    ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಶಾಸಕರ ಅವಧಿಯಲ್ಲಿ ಪಟ್ಟಣ ಸಾಕಷ್ಟು ಅಭಿವೃದ್ಧಿಗೊಂಡಿದೆ. ಬೆಟ್ಟದ ಮಲ್ಲೇಶ್ವರ ಬಡಾವಣೆಯಲ್ಲಿ 12 ಕೋ.ರೂ. ವೆಚ್ಚದಲ್ಲಿ ರಸ್ತೆ, ಚರಂಡಿ, ಸಿ.ಡಿ. ನಿರ್ವಣಗೊಂಡಿವೆ. ಹೆಚ್ಚುವರಿ 10 ಕೋ.ರೂ. ಕ್ರಿಯಾಯೋಜನೆ ಸಿದ್ಧವಾಗಿದ್ದು, ಅನಮೋದನೆ ಬಾಕಿಯಿದೆ. ಸಾವಿರಾರು ನಿರಾಶ್ರಿತರಿಗೆ ನಿವೇಶನ ನೀಡಲು ಗುಡ್ಡದಲ್ಲಿ 10 ಎಕರೆ ಭೂಮಿ ಪುರಸಭೆ ಹೆಸರಿಗೆ ವರ್ಗಾಯಿಸಿದ್ದು, ಶೀಘ್ರದಲ್ಲೇ ನಿವೇಶನ ಹಂಚಲು ಸಿದ್ಧತೆ ನಡೆದಿ ಎಂದರು.

    ಪುರಸಭೆ ಅಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ, ಸದಸ್ಯರಾದ ಶಿವರಾಜ ಅಂಗಡಿ, ರಾಮಣ್ಣ ಕೋಡಿಹಳ್ಳಿ, ಗಣೇಶ ಅಚಲಕರ, ಜಿತೇಂದ್ರ ಸುಣಗಾರ, ಈರಣ್ಣ ಬಣಕಾರ, ಚಂದ್ರಪ್ಪ ಶೆಟ್ಟರ, ವಿನಯ ಹಿರೇಮಠ, ಮಂಜಪ್ಪ ರ್ಬಾ ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts