More

    ಪರಿವರ್ತನೆಗೆ ಶಿಕ್ಷಣ ಅವಶ್ಯಕ

    ಹೂವಿನಹಿಪ್ಪರಗಿ: ಮನುಷ್ಯ ನಾಗರಿಕನಾಗಿ ಪರಿವರ್ತನೆಯಾಗಬೇಕಾದರೆ ಶಿಕ್ಷಣ ಅವಶ್ಯಕವಾಗಿದೆ. ಮಕ್ಕಳಿಗೆ ಶಿಕ್ಷಣ, ಆಹಾರ, ಬಟ್ಟೆ ಅವರಿಗೆ ಶಾಲೆಗಳಿಗೆ ಬರಲು ರಸ್ತೆಯಂತಹ ಕೊರತೆಗಳನ್ನು ನಿಭಾಯಿಸಲು ಇಂತಹ ಸಭೆಗಳನ್ನು ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.
    ಸಮೀಪದ ಕುದುರಿಸಾಲವಾಡಗಿ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಿಪಂ, ಬಸವನಬಾಗೇವಾಡಿ ತಾಪಂ, ಸ್ಥಳೀಯ ಗ್ರಾಪಂ, ಗ್ರಂಥಾಲಯ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

    ಪ್ರತಿಯೊಬ್ಬರಿಗೂ ಆರೋಗ್ಯ ಶಿಕ್ಷಣ ಅವಶ್ಯಕವಾಗಿದೆ. ಮಕ್ಕಳು ಸಾಹಿತ್ಯಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳ ಪಾಲಕರು ಮಕ್ಕಳಿಗೆ ಮನೆಯಲ್ಲಿಯೇ ತಿದ್ದಿ ಸಂಸ್ಕಾರ ನೀಡಬೇಕು. ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಗ್ರಾಪಂನವರು ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಹೇಳಿದರು.
    ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ ಚಲುವಯ್ಯ ಮಾತನಾಡಿ, ಪ್ರತಿ ಗ್ರಾಪಂನಲ್ಲಿ ಮಕ್ಕಳ ಗ್ರಾಮಸಭೆ ನಡೆಸಿ ಶೈಕ್ಷಣಿಕ ತೊಂದರೆಗಳನ್ನು ನಿಭಾಯಿಸಲು ಮುಂದಾಗುವುದಾಗಿ ತಿಳಿಸಿದರು.

    ಜೆಡಿಎಸ್ ಮುಖಂಡ ರಾಜುಗೌಡ ಪಾಟೀಲ(ಕುದುರಿಸಾಲವಾಡಗಿ), ಗುತ್ತಿಗೆದಾರ ಬಸವರಾಜ ದೇಸಾಯಿ, ರುದ್ರಗೌಡ ಹಚಡದ, ಭೀಮನಗೌಡ ಹಚಡದ, ತಾಪಂ ಸದಸ್ಯ ಜಾಕೀರಹುಸೇನ್ ಶಿವಣಗಿ, ಅನೀಲಗೌಡ ಪಾಟೀಲ, ಹಸನಸಾಬ ಢವಳಗಿ, ಶಿಕ್ಷಣ ಸಂಯೋಜಕ ಎಸ್.ಬಿ. ಲಿಂಗರೆಡ್ಡಿ, ಪಿಡಿಒ ಬಿ.ಎಸ್. ಬಡಿಗೇರ, ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಎಸ್.ಟಿ. ಕರಿಗಾರ, ಮುಖ್ಯ ಶಿಕ್ಷಕ ವಿ. ಎಸ್. ಬಿರಾದಾರ ಇದ್ದರು. ಗ್ರಾಪಂ ಕಾರ್ಯದರ್ಶಿ ಶೈಲಜಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮಕ್ಕಳು ಸಮಾರಂಭ ಉದ್ಘಾಟಿಸಿದರು. ವಿದ್ಯಾರ್ಥಿಗಳಾದ ಸಾನಿಯಾ ಚಿತ್ತಾಪುರ, ಶಶಿಕಾಂತ ಬಡಿಗೇರ, ಆಸಮ್ಮಾ ಕರ್ಜಗಿ, ರೋಹಿಣಿ ಹಾವರಗಿ, ದಾನಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಗ್ರಂಥಾಲಯದಲ್ಲಿ ಶಾಲಾ ಮಕ್ಕಳ ಹೆಸರು ನೋಂದಣಿ ಮಾಡಿಕೊಂಡು ಮನೆಗಳಿಗೆ ಪುಸ್ತಕ ಓದಲು ನೀಡಲಾಯಿತು. ಶಿಕ್ಷಕ ಎಸ್.ಬಿ.ಬಾಗೇವಾಡಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts