More

    ಮೂವರು ಅವಿರೋಧ ಆಯ್ಕೆ

    ಹೂವಿನಹಿಪ್ಪರಗಿ: ಸಮೀಪದ ಇಟಗಿ ಗ್ರಾಪಂ ವಾರ್ಡ್ ನಂ.8ರ ಬ್ಯಾಲಾಳ ಗ್ರಾಮದಲ್ಲಿ ಮೂರು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
    ಹಿಂದುಳಿದ ವರ್ಗ ‘ಅ’ ಸ್ಥಾನಕ್ಕೆ ಹಣಮಂತ್ರಾಯ ಗೌಡರ, ಸಾಮಾನ್ಯ ಗಂಡು ಸ್ಥಾನಕ್ಕೆ ರಾಮು ಹಿರೇಕುರುಬರ, ಸಾಮಾನ್ಯ ಮಹಿಳಾ ಸ್ಥಾನಕ್ಕೆ ರಾಜೇಶ್ವರಿ ಚಲವಾದಿ ಅವರನ್ನು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಮಾರ್ಗದರ್ಶನದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.
    ನಂತರ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಯುವ ಮುಖಂಡ ಅವಣ್ಣ ಗ್ವಾತಗಿ, ಸಂಗಮೇಶ ಗ್ವಾತಗಿ, ಶಮೀರ್ ಚಪ್ಪರಬಂದ ಮಾತನಾಡಿದರು. ಸಂಗನಗೌಡ ಗ್ವಾತಗಿ, ಮಾಮಲ್ಲಪ್ಪಗೌಡ ಗೌಡರ, ಶ್ರೀಕಾಂತ ಭಜಂತ್ರಿ, ಶ್ರೀಶೈಲ್ ಮುತ್ಯಾ ಗೌಡರ, ಬಸವರಾಜ ಶೇಷಗೀರಿ, ಮಲ್ಲಕಾರ್ಜುನ ನಾಗರಾಳ, ಅವ್ವಪ್ಪ ಮುಂದಿನಮನಿ, ಮೌಲಾಲಿ ಚಪ್ಪರಬಂದ, ರವಿ ದೊಡಮನಿ, ದುರ್ಗಪ್ಪ ಪೂಜಾರಿ, ದೇವಪ್ಪ ನಾಗರಾಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts