More

    ಗಂಡ-ಹೆಂಡತಿ ಜಗಳ, ಗಂಡ ಖಲಾಸ್!; ನಡುರಸ್ತೆಯಲ್ಲೇ ಮಾರಾಮಾರಿ, ರಕ್ತ ಚೆಲ್ಲಾಪಿಲ್ಲಿ..!!!

    ಹಾವೇರಿ: ಗಂಡ-ಹೆಂಡತಿ ಮಧ್ಯೆ ನಡುರಸ್ತೆಯಲ್ಲೇ ನಡೆದ ಮಾರಾಮಾರಿಯಲ್ಲಿ ಇಬ್ಬರೂ ಗಂಭೀರ ಗಾಯಕ್ಕೊಳಗಾಗಿದ್ದು, ಆ ಪೈಕಿ ಪತಿ ಮೃತಪಟ್ಟಿದ್ದಾನೆ. ಪತಿ ಮೈಲಪ್ಪ ತಂಬೂರಿ (50) ಗಂಭೀರ ಗಾಯಕ್ಕೊಳಗಾಗಿ ಅಸುನೀಗಿದ್ದರೆ, ಪತ್ನಿ ಮಾದೇವಕ್ಕ ಮೈಲಪ್ಪ ತಂಬೂರಿಯ ಸ್ಥಿತಿ ಚಿಂತಾಜನಕವಾಗಿದೆ.

    ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಹಲಗೇರಿ ಕ್ರಾಸ್ ಬಳಿ ಶನಿವಾರ ಮಧ್ಯಾಹ್ನ ನಡುರಸ್ತೆಯಲ್ಲಿ ಈ ದಂಪತಿ ಹೊಡೆದಾಡಿಕೊಂಡಿದ್ದರು. ಹಿಂಬದಿಯಿಂದ ಬಂದ ಪತಿ, ಪತ್ನಿಯ ತಲೆಗೆ ಮಚ್ಚಿನಿಂದ ಹೊಡೆದು, ನೋಡನೋಡುತ್ತಿದ್ದಂತೆ ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡಿದ್ದ. ರಕ್ತದ ಮಡುವಿನಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಇದೀಗ ಮೃತಪಟ್ಟಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹೊಡೆದಾಟ ನಡೆದಿತ್ತು.

    ಹಿಂಬದಿಯಿಂದ ಬಂದವ ಪತ್ನಿ ತಲೆಗೆ ಮಚ್ಚು ಬೀಸಿ ತನ್ನ ಕುತ್ತಿಗೆಯನ್ನೂ ಸೀಳಿಕೊಂಡ! ನಡುರಸ್ತೆಯಲ್ಲೇ ದಂಪತಿ ನರಳಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts