More

    ಪತ್ನಿಗೆ ರೀಲ್ಸ್​ ಹುಚ್ಚು ಆಕೆಯ ಪತಿಗೆ ನಾದಿನಿ ಮೇಲೆ ಕಣ್ಣು: ನಡುರಾತ್ರಿ ಹರಿದ ನೆತ್ತರು, 1 ವರ್ಷದ ಮಗುವೂ ಬಲಿ

    ಲಲಿತ್​ಪುರ್​: ನಾದಿನಿಯ ಮೇಲೆ ಕಣ್ಣು ಹಾಕಿದ ದುಷ್ಟನೊಬ್ಬ ಆಕೆಯನ್ನು ಮದುವೆಯಾಗುವ ದುರಾಲೋಚನೆಯಿಂದ ತಾಳಿ ಕಟ್ಟಿದ ಪತ್ನಿ ಮತ್ತು ಹೆತ್ತ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಲಿತ್​ಪುರ್​ನಲ್ಲಿ ನಡೆದಿದೆ.

    ಕ್ರಿಕೆಟ್​​ ಬ್ಯಾಟ್​ನಿಂದ 22 ವರ್ಷದ ಪತ್ನಿ ಮತ್ತು 1 ವರ್ಷದ ಮಗಳ ಮೇಲೆ ಹಲ್ಲೆಗೈದು ಭೀಕರ ಹತ್ಯೆ ಮಾಡಿ, ದರೋಡೆ ಡ್ರಾಮಾ ಮಾಡುವ ಮೂಲಕ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಆದರೆ, ಪಾಪದ ಮೂಟೆ ಹೆಗಲೇರಿತು ಎಂಬಂತೆ ಕೊನೆಗೆ ಸಿಕ್ಕಿಬಿದ್ದಿದ್ದಾನೆ.

    ಕೊಲೆ ಮಾಡಿದ ಕಟುಕನನ್ನು ನೀರಜ್​ ಕುಶ್ವಾಹ್​ ಎಂದು ಗುರುತಿಸಲಾಗಿದೆ. ಲಲಿತಪುರದ ಸಾದರ್​ ಕೊಟ್ವಾಲಿ ಏರಿಯಾದ ಚಾಂದ್​ಮಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಆರು ಮುಸುಕುಧಾರಿಗಳು ತಡರಾತ್ರಿ 1.30ಕ್ಕೆ ಮನೆಗೆ ನುಗ್ಗಿ ನನ್ನ ಬಾಯಿಗೆ ಸಾಕ್ಸ್​ ತುರುಕಿ, ನನ್ನ ಪತ್ನಿ ಮತ್ತು ಮಗಳನ್ನು ಹೊಡೆದು ಬರ್ಬರವಾಗಿ ಕೊಂದರು. ಚಿನ್ನಾಭರಣ ಮತ್ತು ನಗದು ದೋಚಿಕೊಂಡು ನಂತರ ಪರಾರಿಯಾದರು ಎಂದು ಕತೆ ಕಟ್ಟಿದ್ದ.

    ಆರೋಪಿ ನೀರಜ್ ದೇಹದಲ್ಲಿ ಗಾಯಗಳಾಗಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಪೊಲೀಸರಿಗೆ ಹೇಳಿಕೆ ನೀಡುತ್ತಿರುವ ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆರೋಪಿ ಹೇಳಿದ ಕತೆಯನ್ನು ಪೊಲೀಸರು ನಂಬಲಿಲ್ಲ ಮತ್ತು ಆತನ ಮೇಲೆ ಅನುಮಾನವು ಸಹ ಮೂಡಿತು. ಬಳಿಕ ಪೊಲೀಸರು ತಮ್ಮ ಶೈಲಿಯಲ್ಲಿ ನೀರಜ್​ನನ್ನು ವಿಚಾರಣೆ ಮಾಡಿದಾಗ ಡಬಲ್ ಮರ್ಡರ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ನನ್ನ ಪತ್ನಿ ಸೌಂದರ್ಯವತಿ ಆಕೆಗೆ ರೀಲ್ಸ್​ ಹುಚ್ಚು
    ನನ್ನ ಪತ್ನಿ ಸೌಂದರ್ಯವತಿ. ಆಕೆ ದಿನಪೂರ್ತಿ ರೀಲ್ಸ್​ ಮಾಡುವುದರಲ್ಲಿ ಮುಳುಗಿರುತ್ತಿದ್ದಳು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಜನರ ಜತೆ ಮಾತನಾಡುತ್ತಿದ್ದರು. ನನ್ನ ಮೇಲೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ಆಕೆಯನ್ನು ಬಿಡಲು ನಿರ್ಧರಿಸಿದ್ದೆ ಮತ್ತು ಆಕೆಯ ಸಹೋದರಿಯನ್ನು ಮದುವೆಯಾಗಲು ಬಯಸಿದ್ದೆ. ಆದರೆ, ಇದಕ್ಕೆ ಪತ್ನಿಯ ವಿರೋಧ ಇತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆಯಿತು. ನಾನು ಕ್ರಿಕೆಟ್​ ಬ್ಯಾಟ್​ನಿಂದ ಹೊಡೆದು ಸಾಯಿಸಿದೆ. ಬಳಿಕ ದರೋಡೆ ನಡೆದಿದೆ ಎಂದು ನಂಬಿಸಲು ಯತ್ನಿಸಿದೆ, ಆರಂಭದಲ್ಲಿ ನನ್ನ ಮೇಲೆ ಯಾರಿಗೆ ಸಂಶಯ ಬರಲಿಲ್ಲ ಎಂದು ಹೇಳಿದ್ದಾರೆ.

    ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿತ್ತು
    ದರೋಡೆ ನಡೆದಿದೆ ಎಂಬುದನ್ನು ನಂಬಿಸಲು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದ. ಅಲ್ಲದೆ, ಚಿನ್ನಾಭರಣಗಳನ್ನು ಟಿವಿಯ ಹಿಂದೆ ಬಚ್ಚಿಟ್ಟಿದ್ದ. ಆದರೆ, ಪೊಲೀಸರು ಪತಿ ಹೂಡಿದ್ದ ಸಂಚನ್ನು ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದಾರೆ. ಜೋಡಿ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ 25 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿದೆ. (ಏಜೆನ್ಸೀಸ್​)

    ಉತ್ತರ ಪ್ರದೇಶ: ಜ.22 ರಂದು ಮಾಂಸದ ಅಂಗಡಿಗಳನ್ನು ಮುಚ್ಚಲು ನಿರ್ಧಾರ, ಈ ಕಾರ್ಯಕ್ರಮವೂ ರದ್ದು

    ‘ನಾನು ನಿರ್ದೇಶನ ಮಾಡಲು ಸಾಧ್ಯವಿಲ್ಲ’; ನಟಿ ಕೃತಿ ಸನನ್ ಕೊಟ್ಟ ಕಾರಣ ಹೀಗಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts