More

    ನರೇಗಾ ಯೋಜನೆಯಡಿ ಕೆಲಸ ಮಾಡಿಕೊಳ್ಳಿ

    ಹುಲಸೂರು: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಯಾವುದೇ ಫಲಾನುಭವಿ, ಕುಟುಂಬ ಜೀವಿತಾವಧಿಯಲ್ಲಿ ೨.೫೦ ಲಕ್ಷ ರೂ.ವರೆಗೆ ವಿವಿಧ ವೈಯಕ್ತಿಕ ಕಾಮಗಾರಿ ಪಡೆಯಲು ಅರ್ಹರು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಶಿಂಧೆ ತಿಳಿಸಿದರು.

    ತೊಗಲೂರ ಗ್ರಾಪಂನಲ್ಲಿ ಬುಧವಾರ ಆಯೋಜಿಸಿದ್ದ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಜಾಗೃತಿ ವಾಹನದ ಮೂಲಕ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಅ.೩೧ರವರೆಗೆ ಮನೆ ಮನೆಗೆ ಜಾಥಾ ತಲುಪಲಿದೆ. ವಿವಿಧ ಕಾಮಗಾರಿಗಳ ಬೇಡಿಕೆ ಅರ್ಜಿ ಸ್ವೀಕರಿಸಲು ವಾಹನ ಹಾಗೂ ಗ್ರಾಪಂನಲ್ಲಿ ಬೇಡಿಕೆ ಸ್ವೀಕಾರ ಪೆಟ್ಟಿಗೆ ಇಡಲಾಗುವುದು. ಅ.೩೧ರವರೆಗೆ ಅರ್ಜಿ ಸ್ವೀಕರಿಸಲಾಗುವುದು ಎಂದರು.

    ನರೇಗಾ ಐಇಸಿ ಸಂಯೋಜಕ ಗಣಪತಿ ಹಾರಕೂಡೆ ಮಾತನಾಡಿ, ಅಭಿಯಾನದುದ್ದಕ್ಕೂ ಕೂಲಿಕಾರರಿಂದ ಕೂಲಿ ಬೇಡಿಕೆ ಹಾಗೂ ಸಾರ್ವಜನಿಕರಿಂದ ಕಾಮಗಾರಿ ಬೇಡಿಕೆ ಸ್ವೀಕರಿಸಲು ವಾರ್ಡ್ ಸಭೆ, ಗ್ರಾಮ ಸಭೆ ಆಯೋಜಿಸಲಾಗುವುದು. ನರೇಗಾದಲ್ಲಿ ಹಲವಾರು ವೈಯಕ್ತಿಕ ಸೌಲಭ್ಯಗಳಿದ್ದು, ಇದರ ಲಾಭ ಪಡೆಯಲು ಗ್ರಾಪಂಗೆ ಸಂಪರ್ಕಿಸಬೇಕು ಎಂದು ಹೇಳಿದರು.

    ಗ್ರಾಪಂ ಸದಸ್ಯ ಶೇಷಿರಾವ ರಾಜೋಳೆ, ಕಾರ್ಯದರ್ಶಿ ಲೋಹಿತ್ ಜಮಾದಾರ, ಚಂದ್ರಕಾಂತ ಶಿಂಧೆ, ಸುನೀಲ್ ಪಾಟೀಲ್, ರವಿ ಕಾಮಣ್ಣ, ರಾಮ ಆಗ್ರೆ, ಪಂಚಶೀಲಾ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಾದ ಸಂಗೀತಾ ಬೇಲೂರೆ, ಅಂಬಿಕಾ ಮಂಠಾಳೆ, ಮಹಾನಂದಾ ಮಠಪತಿ, ಸಂತೋಷಿ ಭೈರೆ, ಪಶುಸಖಿ ಅಂಬಿಕಾ ಕೌಟಾಳೆ, ಬಸವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts