More

    ಅಯೋಧ್ಯಾನಗರದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆ

    ಧಾರವಾಡ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸುಸಂದರ್ಭದಲ್ಲಿ ನಗರದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆ ನಿರ್ಮಿಸಲಾಗಿದೆ. ಧಾರವಾಡ- ನವಲಗುಂದ ರಸ್ತೆಯ ಅಯೋಧ್ಯಾನಗರದಲ್ಲಿ ಸಿಮೆಂಟ್‌ನಲ್ಲಿ ನಿರ್ಮಿಸಿರುವ ಶ್ರೀರಾಮನ ಪ್ರತಿಮೆ 21 ಅಡಿ ಎತ್ತರವಿದೆ.
    ಅಯೋಧ್ಯಾನಗರ ಬಡಾವಣೆಯ ಪ್ರವೇಶ ದ್ವಾರದಲ್ಲಿ ಪ್ರತಿಮೆ ನಿರ್ಮಿಸಲಾಗಿದೆ. ಇದು ಹಿಂದುಪರ ಸಂಘಟನೆಯ ಕಾರ್ಯಕರ್ತರೇ ನಿಮÁðಣ ಮÁಡಿರುವ ಬಡಾವಣೆಯಾಗಿದೆ. ಸುಮಾರು 12 ಎಕರೆ ಪ್ರದೇಶದ ಬಡಾವಣೆಯನ್ನು ಹಿಂದುಪರ ಸಂಘಟನೆಯ ಕಾರ್ಯಕರ್ತರು ಶ್ರೀರಾಮನಿಗೆ ಸಮರ್ಪಿಸಿದ್ದಾರೆ.
    ವರ್ಷದ ಹಿಂದೆಯೇ ನಿರ್ಮಾಣಗೊಂಡಿದ್ದ ಬಡಾವಣೆಯ ಉದ್ಘಾಟನೆಯನ್ನು ರಾಮ ಮಂದಿರ ಉದ್ಘಾಟನೆ ಮುಹೂರ್ತಕ್ಕಾಗಿ ಕಾರ್ಯಕರ್ತರು ಕಾಯುತ್ತಿದ್ದರು. ರಾಮಮಂದಿರ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದ ಹಿನ್ನೆಲೆಯಲ್ಲಿ ಬಡಾವಣೆ ಹಾಗೂ ಪ್ರತಿಮೆ ಅನಾವರಣಗೊಳ್ಳುತ್ತಿದೆ. ಪ್ರತಿಮೆಯ ಕೆಳಭಾಗದಲ್ಲಿ `ಐ ಲವ್ ಅಯೋಧ್ಯಾ’ ಎಂಬ ಸೆಲಿ ಸ್ಪಾಟ್ ನಿರ್ಮಿಸಲಾಗಿದೆ. ಮೂರ್ತಿಯ ಜೊತೆಗೆ ಸೆಲಿ ತೆಗೆದುಕೊಳ್ಳಲು ಅವಕಾಶವಿದ್ದು, 21ರಿಂದ ಪ್ರತಿಮೆಯು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts