More

    VIDEO| ಯಾಕ್ರಿ ಇಂತಹ ಪಾತ್ರಗಳನ್ನು ಮಾಡಿ ಜನರ ಮನಸ್ಸನ್ನು ಹಾಳು ಮಾಡ್ತೀರಾ: ರಚಿತಾ ವಿರುದ್ಧ ಹುಚ್ಚಾ ವೆಂಕಟ್​ ಫೈರ್​!

    ಬೆಂಗಳೂರು: ಪ್ರೇಮ್​ ನಿರ್ದೇಶನದ “ಏಕ್​ ಲವ್​ ಯಾ” ಚಿತ್ರದಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡಿರುವ ನಟಿ ರಚಿತಾ ರಾಮ್​ ವಿರುದ್ಧ ಫೈರಿಂಗ್​ ಸ್ಟಾರ್​ ಹುಚ್ಚ ವೆಂಕಟ್​ ಆಕ್ರೋಶಗೊಂಡಿದ್ದಾರೆ.

    ಪ್ರೇಮಿಗಳ ದಿನದಂದು ಏಕ್​ ಲವ್​ ಯಾ ಚಿತ್ರದ ಟೀಸರ್​ ಬಿಡುಗಡೆಯಾಗಿತ್ತು. ಅದರಲ್ಲಿ ನಾಯಕನೊಂದಿಗೆ ರಚಿತಾ ರಾಮ್​ ಸಿಗರೇಟ್​ ಸೇದುವುದು ಮತ್ತು ಲಿಪ್​ಲಾಕ್​ ಮಾಡಿರುವ ದೃಶ್ಯವಿದೆ. ಇದರಿಂದ ಅಸಮಾಧಾನಗೊಂಡಿರುವ ಹುಚ್ಚ ವೆಂಕಟ್​ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಎಂದಿನಂತೆ ತಮ್ಮ ಶೈಲಿಯಲ್ಲಿ ನನ್​ ಮಗಂದ್ ಡೈಲಾಗ್​ನಿಂದ ಮಾತು ಆರಂಭಿಸಿರುವ ವೆಂಕಟ್​, ಇದು ರಚಿತಾ ರಾಮ್​ ಅವರಿಗೆ ಹೇಳುತ್ತಿರುವುದು. ಯಾಕ್ರಿ ಈ ಥರಹದ ಪಾತ್ರಗಳನ್ನು ಮಾಡಿ ಜನರ ಮನಸ್ಸನ್ನು ಹಾಳು ಮಾಡುತ್ತಿದ್ದೀರಾ? ನೀವು ಮಾಡಿರುವುದು ಏನು? ಸಿಗರೇಟ್​ ಸೇದುವುದಂತೆ, ಲಿಪ್​ ಕಿಸ್​ ಅಂತೆ.. ಇದರಿಂದ ಏನಾಗುತ್ತೆ? ಮಕ್ಕಳಿಂದ ಹಿಡಿದು ಹೆಣ್ಣು ಮಕ್ಕಳು ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡೋಕಾಗುತ್ತಾ? ಹೆಣ್ಣು ಮಕ್ಕಳಿಗೆ ಮುಜುಗರ ಆಗುವುದಿಲ್ಲವಾ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಎಸೆದಿದ್ದಾರೆ.

    ಡೈರೆಕ್ಟರ್​ ಕೊಟ್ರೂ ಅದಕ್ಕೆ ಮಾಡಿದ್ವಿ ಎಂದು ಎಲ್ಲವನ್ನೂ ಡೈರೆಕ್ಟರ್​ ಮೇಲೆ ಹಾಕ್ತೀರಾ. ನಿಮಗೆ ಇಷ್ಟವಿಲ್ಲ ಅಂದರೆ ಡೈರೆಕ್ಟರ್​ ಬಲವಂತ ಮಾಡಲು ಸಾಧ್ಯವಿಲ್ಲ. ಯಾಕ್​ ಈ ಥರಾ ಮಾಡ್ತೀರಾ? ಕಳೆದ ಸಿನಿಮಾದಲ್ಲೂ ಮಾಡಿದಿರಿ, ಈ ಸಿನಿಮಾದಲ್ಲೂ ಮಾಡಿದ್ದೀರಾ, ನಿಮ್ಮ ಪ್ರತಿಭೆಯನ್ನು ತೋರಿಸಲು ಬೇರೆ ದಾರಿ ಇಲ್ವಾ? ನಿಮಗೆ ಪ್ರತಿಭೆ ಇದ್ದರೆ, ಅದನ್ನು ತೊರಿಸಿ, ಇದನ್ನು ಪ್ರತಿಭೆ ಎಂದು ಕರೆಯುತ್ತಾರಾ ಎಂದು ವೆಂಕಟ್​ ಉಗಿದಿದ್ದಾರೆ.

    ಇದರಿಂದ ಎಷ್ಟು ಜನ ಹಾಳಾಗುತ್ತಾರೆ ಎಂದು ನಿಮಗೆ ಗೊತ್ತಾ? ಒಂದು ಗಂಡಸು ಡ್ರಿಂಕ್ಸ್​ ಮಾಡಿ ಸಿಗರೇಟ್​ ಸೇದಿದರೇನೆ ತಪ್ಪು. ಅಂತಹದರಲ್ಲಿ ನೀವು ಸಿಗರೇಟ್​ ಸೇದುವುದು ಮತ್ತು ಲಿಪ್​ ಕಿಸ್​ ಮಾಡುವುದೆಂದರೆ ಏನು ಅರ್ಥ? ಇಲ್ಯಾರೂ ಕೇಳುವವರು ಇಲ್ವಾ? ಇದರಿಂದ ನಿಮ್ಮ ಮನೆಯಲ್ಲಿನ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ನೋವು ಅನುಭವಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಲಹೆ ನೀಡಿದ್ದಾರೆ.

    ಮೊದಲ ಕನ್ನಡ ಇಂಡಸ್ಟ್ರಿ ಅಂದರೆ ಒಂದೂ ಅಶ್ಲೀಲ ಇಲ್ಲ ಅನ್ನುವಂತೆ ಇತ್ತು. ಇವತ್ತು ಏನೆಲ್ಲಾ ಆಗಿದೆ ನೋಡಿ. ಪ್ರೇಮ್​ ನಿನಗೆ ಇದು ಬೇಕಿತ್ತಾ? ಇದರಿಂದ ನೀನು ಜನರಿಗೆ ತೋರಿಸುವುದಾದರೂ ಏನು? ಆ ದೃಶ್ಯವನ್ನು ತೆಗೆದು ಹಾಕು ಎಂದು ವೆಂಕಟ್​ ಪ್ರೇಮ್​ ಅವರಿಗೆ ಒತ್ತಾಯ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts