More

    “ವೃಷಸೇನ’ನಾಗಿ ಮಿಂಚಿದ ಇನ್​ಸ್ಪೆಕ್ಟರ್​ “ಜೆ.ಎಂ.ಕಾಲಿಮಿಚಿ೯’

    ಹುಬ್ಬಳ್ಳಿ: ಉತ್ತರ ಕರ್ನಾಟಕದ ಸಾಂಪ್ರದಾಯಿಕ ಕಲೆ ದೊಡ್ಡಾಟ ಪ್ರದರ್ಶನವೊಂದರಲ್ಲಿ ನಗರದ ಪೊಲೀಸ್​ ಅಧಿಕಾರಿಯೊಬ್ಬರು ವೃಷಸೇನನಾಗಿ ಬಣ್ಣ ಹಚ್ಚುವ ಮೂಲಕ ತಮ್ಮೊಳಗೊಬ್ಬ ಕಲಾವಿದ ಅಡಗಿದ್ದಾನೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
    ಗೋಕುಲ ರೋಡ್​ ಠಾಣೆಯ ಇನ್​ಸ್ಪೆಕ್ಟರ್​ ಜೆ.ಎಂ.ಕಾಲಿಮಿಚಿ೯ ಅವರು ವೃಷಸೇನನ ಪಾತ್ರದಲ್ಲಿ ಮಿಂಚಿದ್ದಾರೆ. ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ಜನಪದ ಕಲಾ ಬಳಗ ಟ್ರಸ್ಟ್​ ವತಿಯಿಂದ ಆಯೋಜಿಸಿದ್ದ ಡಾ.ಚಂದ್ರಶೇಖರ ಕಂಬಾರರ ದತ್ತಿ ಕಾರ್ಯಕ್ರಮದಲ್ಲಿ ರಮೇಶ ಕರಬಸಮ್ಮನವರ ನಿರ್ದೇಶನದಲ್ಲಿ “ಕರ್ಣ ಪರ್ವ’ ದೊಡ್ಡಾಟ ಪ್ರದಶಿರ್ಸಲಾಯಿತು. ಇದರಲ್ಲಿ ಕಾಲಿಮಿಚಿರ್ ಅವರು ಕರ್ಣನ ಮಗ ವೃಷಸೇನನ ಪಾತ್ರ ಮಾಡಿದ್ದಾರೆ. ವಿಶೇಷ ವೇಷಭೂಷಣ ಹಾಗೂ ಖಡಕ್​ ಡೈಲಾಗ್​ಗಳ ಮೂಲಕ ಕಲಾ ರಸಿಕರನ್ನು ರಂಜಿಸಿದ್ದಾರೆ. ಇವರ ನಟನೆ ಕಂಡು ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದಿದ್ದಾರೆ.
    ಬಾಲ್ಯದಿಂದಲೂ ಕರ್ಣನ ಪಾತ್ರದಿಂದ ಸ್ಫೂತಿ೯ ಪಡೆದುಕೊಂಡಿರುವ ಕಾಲಿಮಿಚಿ೯ ಅವರು, ಒತ್ತಡದ ಕರ್ತವ್ಯದ ನಡುವೆಯೂ ಬಿಡುವಿನ ವೇಳೆಯಲ್ಲಿ ತಮ್ಮ ಹವ್ಯಾಸವನ್ನು ಜೀವಂತವಾಗಿಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts