More

    ಖತರ್ನಾಕ್ ಮೊಬೈಲ್ ಕಳ್ಳ ಅಂದರ್

    ಹುಬ್ಬಳ್ಳಿ: ಬೈಪಾಸ್ ರಸ್ತೆ ಹಾಗೂ ಡಾಬಾಗಳ ಬಳಿ ನಿಂತ ಲಾರಿಗಳಲ್ಲಿ ಇಟ್ಟಿದ್ದ ಮೊಬೈಲ್ ಫೋನ್​ಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳನನ್ನು ಉಪನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆತನಿಂದ 1,72,000 ರೂ. ಮೌಲ್ಯದ 9 ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ.

    ಹೆಗ್ಗೇರಿ ಮಾರುತಿ ನಗರ 1ನೇ ಕ್ರಾಸ್ ನಿವಾಸಿ, ಆಟೋ ಚಾಲಕ ರಫೀಕ ಫತ್ತೇಸಾಬ್ ಧಾರವಾಡ (35) ಬಂಧಿತ ಆರೋಪಿ. ಲಾರಿಗಳನ್ನೇ ಗುರಿಯಾಗಿಸಿಕೊಂಡಿದ್ದ ರಫೀಕ, ಡಾಬಾ ಬಳಿ ಹಾಗೂ ರಸ್ತೆಬದಿ ನಿಂತಿರುವ ಲಾರಿಗಳನ್ನು ಹುಡುಕುತ್ತಿದ್ದ. ಚಾಲಕ-ಕ್ಲೀನರ್​ಗಳು ಲಾರಿಯಲ್ಲಿ ಮೊಬೈಲ್​ಫೋನ್ ಇಟ್ಟಿದ್ದರೆ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗುತ್ತಿದ್ದ.

    ನ್ಯೂ ಕಾಟನ್ ಮಾರ್ಕೆಟ್​ನಲ್ಲಿ ಲಾರಿಯೊಂದರ ಎಡಭಾಗದ ಗ್ಲಾಸ್ ರಬ್ಬರ್​ಅನ್ನು ಬ್ಲೇಡ್​ನಿಂದ ಕತ್ತರಿಸಿ, ಗ್ಲಾಸ್ ತೆಗೆದು ಬ್ಯಾನಟ್ ಮೇಲೆ ಇಟ್ಟಿದ್ದ ದುಬಾರಿ ಬೆಲೆಯ ಐಫೋನ್ ಕದ್ದು ಪರಾರಿಯಾಗಿದ್ದ. ಆ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜನತಾ ಬಜಾರ್​ನಲ್ಲಿ ಅಂಗಡಿ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ವಿಜಯ ಬೆಂಡಿಗೇರಿ ಜತೆಯೂ ಈತ ಭಾಗಿಯಾಗಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಇನ್ಸ್​ಪೆಕ್ಟರ್ ಎಸ್.ಕೆ. ಹೊಳೆಯಣ್ಣವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್​ಐ ಸೀತಾರಾಮ ಲಮಾಣಿ, ಸಿಬ್ಬಂದಿ ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಉಮೇಶ ಹೆದ್ದೇರಿ, ರವಿ ಹೊಸಮನಿ, ರೇಣು ಸಿಕ್ಕಲಗೇರ, ಮಾಬುಸಾಬ್ ಮುಲ್ಲಾ, ಮಂಜು ಕಮತದ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts