More

    ಫ್ಲೈ ಓವರ್ ನಿರ್ಮಾಣ ಕಾಮಗಾರಿ ವೇಳೆ ಸಂಚಾರ ನಿರ್ವಹಣೆ ಹೇಗೆ?

    ಹುಬ್ಬಳ್ಳಿ: ಫ್ಲೈ ಓವರ್ ನಿರ್ವಣದ ಸಂದರ್ಭದಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆ ಹಾಗೂ ಅದರ ನಿರ್ವಹಣೆಯ ಸಾಧ್ಯತೆ ಕುರಿತ ಪ್ರಾತ್ಯಕ್ಷಿಕೆಯು ನಗರದ ಗೋಕುಲ ರಸ್ತೆಯ ವಾಣಿ ವಿಲಾಸ ವೃತ್ತದ ಬಳಿ ಸೋಮವಾರ ನಡೆಯಿತು.

    ಮಹಾನಗರ ಪೊಲೀಸ್ ಇಲಾಖೆ, ಪಿಡಬ್ಲುಡಿ ರಾಷ್ಟ್ರೀಯ ಹೆದ್ದಾರಿ ಘಟಕ ಹಾಗೂ ಗುತ್ತಿಗೆ ಸಂಸ್ಥೆ ಜಂಡು ಕನ್​ಸ್ಟ್ರಕ್ಷನ್ ಇಂಡಿಯಾ ಪ್ರೖೆ.ಲಿ.ನ ಸಿಬ್ಬಂದಿ ಈ ನಿಟ್ಟಿನಲ್ಲಿ ಪರಿಶೀಲನೆ ಕೈಗೊಂಡರು.

    ಮೊದಲಿಗೆ ಸುಮಾರು 150 ಮೀಟರ್ ಉದ್ದದ ಮಾರ್ಗದಲ್ಲಿ ನಿರ್ಮಾಣ ಕೈಗೊಂಡರೆ ಸಂಚಾರ ವ್ಯವಸ್ಥೆಯನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಕೆಲ ಪ್ರಯೋಗಗಳನ್ನು ಕೈಗೊಳ್ಳಲಾಯಿತು. ಪಿಲ್ಲರ್ ಅಳವಡಿಸುವ 3 ಸ್ಥಳಗಳಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಯಿತು. ಈ ಬ್ಯಾರಿಕೇಡ್ ಅಳವಡಿಕೆಯ ಪರಿಣಾಮವಾಗಿ ಹೊಸೂರು ವೃತ್ತ ಹಾಗೂ ಗೋಕುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಅರವಿಗೆ ಬಂದಿತು.

    ಈ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ವಾಹನ ಸಂಚಾರವನ್ನು ಬೇರೆ ಮಾರ್ಗದತ್ತ ಬದಲಾಯಿಸುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಪರಿಶೀಲಿಸಿದರು.

    ವಿನ್ಯಾಸ ಅಂತಿಮ: ಫ್ಲೈ ಓವರ್ ನಿರ್ವಣದ ವಿನ್ಯಾಸ ರಚನೆ ಅಂತಿಮಗೊಂಡಿದೆ. ಆದರೆ, ಇದುವರೆಗೆ ವಿನ್ಯಾಸವನ್ನು ಪಿಡಬ್ಲುಡಿ ರಾಷ್ಟ್ರೀಯ ಹೆದ್ದಾರಿ ಘಟಕಕ್ಕೆ ಗುತ್ತಿಗೆ ಸಂಸ್ಥೆಯವರು ಸಲ್ಲಿಸಿಲ್ಲ. ಪಿಡಬ್ಲುಡಿ ರಾಷ್ಟ್ರೀಯ ಹೆದ್ದಾರಿ ಘಟಕದ ಅಧಿಕಾರಿಗಳು ವಿನ್ಯಾಸಕ್ಕೆ ಸಮ್ಮತಿ ಸೂಚಿಸಿದ ನಂತರ ಕಾಮಗಾರಿ ಶುರುವಾಗಲಿದೆ.

    ಒಂದೆರೆಡು ದಿನಗಳಲ್ಲಿ ವಿನ್ಯಾಸ ರಚನೆ ಗುತ್ತಿಗೆ ಸಂಸ್ಥೆಯಿಂದ ಪಿಡಬ್ಲುಡಿ ರಾಷ್ಟ್ರೀಯ ಹೆದ್ದಾರಿ ಘಟಕದ ಅಧಿಕಾರಿಗಳ ಕೈಗೆ ಸೇರುವ ಸಾಧ್ಯತೆ ಇದೆ.

    ಫ್ಲೈ ಓವರ್ ಕಾಮಗಾರಿ ಪ್ರಾರಂಭಗೊಂಡಾಗ ಉಂಟಾಗಬಹುದಾದ ಸಂಚಾರ ದಟ್ಟಣೆ, ವಾಹನ ಸಂಚಾರದ ಮಾರ್ಗ ಬದಲಾವಣೆ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿ ಗೋಕುಲ ರಸ್ತೆಯಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಯಿತು.

    ರಾಜೇಂದ್ರ ಹುರಕಡ್ಲಿ, ಕಾರ್ಯನಿರ್ವಾಹಕ ಅಧಿಕಾರಿ,ಪಿಡಬ್ಲುಡಿ ಎನ್​ಎಚ್, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts