More

    ಕರೊನಾಗೆ ಬಲಿಯಾದವರ ಅಂತ್ಯಕ್ರಿಯೆ ಹೇಗಿರಬೇಕು?

    ಬೆಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಮಾರ್ಗಸೂಚಿ ಹೊರಡಿಸಿದೆ. ಅಂತ್ಯಕ್ರಿಯೆ ವೇಳೆ ಕುಟುಂಬದವರಿಗೆ ಮುಖ ನೋಡಲು ಅವಕಾಶವಿದ್ದು, ಮುಟ್ಟುವಂತಿಲ್ಲ. ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗೆ ಸೋಂಕು ಹರಡದಂತೆ ಕ್ರಮವಹಿಸಬೇಕೆಂದು ತಿಳಿಸಿದೆ. ಇನ್ನು ಸೋಂಕಿತ ಮೃತ ದೇಹದಲ್ಲಿ ಶ್ವಾಸಕೋಶಗಳು ಮಾತ್ರ ಸೋಂಕಿಗೆ ಒಳಗಾಗಿರುತ್ತವೆ. ದೇಹ ನಿರ್ವಹಣೆ ಮಾಡುವಾಗ ಆರೋಗ್ಯ ಸಿಬ್ಬಂದಿ ಕೈಗಳ ನೈರ್ಮಲ್ಯ,

    ಸ್ವರಕ್ಷಣಾ ಸಲಕರಣೆ (ವಾಟರ್ ರೆಸಿಸ್ಟಂಟ್ ಏಪ್ರಾನ್, ಗ್ಲೌಸ್, ಮಾಸ್ಕ್,ಕನ್ನಡಕ), ಸೋಂಕಿತ ವ್ಯಕ್ತಿಗೆ ಬಳಸಿದ ಸಲಕರಣೆ, ಅವರು ಬಳಸಿದ ಹಾಸಿಗೆ, ಪರಿಸರ, ನೆಲ ಹಾಗೂ ಮೃತದೇಹಕ್ಕೆ ಬಳಕೆ ಮಾಡಿದ ಬ್ಯಾಗ್​ಗಳನ್ನು ಸೋಂಕುಮುಕ್ತಗೊಳಿಸಬೇಕು. ಸೋಂಕಿತ ಮೃತ ದೇಹ ಸಂಸ್ಕಾರ ಮಾಡಲು ನೆರವಾಗುವ ಆಂಬುಲೆನ್ಸ್ ಸಿಬ್ಬಂದಿ, ಶವಾಗಾರ, ಚಿತಾಗಾರ ಅಥವಾ ಸ್ಮಶಾನ ಸಿಬ್ಬಂದಿಗೆ ಸೋಂಕು ತಡೆ ಬಗ್ಗೆ ತರಬೇತಿ ನೀಡಬೇಕು.

    ಅಂತ್ಯಕ್ರಿಯೆಗೆ ರವಾನಿಸುವುದು: ಸೋರಿಕೆರಹಿತ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಇಡಬೇಕು. ಈ ಚೀಲದ ಹೊರಭಾಗವನ್ನು ಶೇ.1 ಹೈಪೋಕ್ಲೋರೈಟ್​ನಿಂದ ಸೋಂಕು ರಹಿತಗೊಳಿಸಬೇಕು. ಬಳಿಕ ಮೃತದೇಹ ವನ್ನು ಸಂಬಂಧಿಕರಿಗೆ ಹಸ್ತಾಂತರಿಸಬಹುದು ಅಥವಾ ಶವಾಗಾರಕ್ಕಾದರೂ ಸಾಗಿಸಬಹುದು. ಸೋಂಕಿತ ವ್ಯಕ್ತಿ ಬಳಸಿದ ಬಟ್ಟೆಗಳನ್ನು ಅಪಾಯಕಾರಿ ಜೈವಿಕ ವಸ್ತುಗಳನ್ನಿಡುವ ಚೀಲದಲ್ಲಿ ಇರಿಸಬೇಕು. ಮೃತದೇಹದ ಎಲ್ಲ ಜೈವಿಕ ತ್ಯಾಜ್ಯಗಳನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ನಿಯಮಗಳಿ ಗನುಸಾರವಾಗಿ ನಿರ್ವಹಿಸಬೇಕು. ಕುಟುಂಬದವರ ಭಾವನೆಗಳನ್ನು ಗೌರವಿಸಬೇಕು ಹಾಗೂ ಅವರಿಗೆ ಆಪ್ತ ಸಲಹೆಯನ್ನು ನೀಡಬೇಕು. ಸಮಾಧಿಗೆ ಸಂಬಂಧಿಸಿದಂತೆ ಮೃತದೇಹವನ್ನು ಮುಟ್ಟದೆ ಮಾಡಬಹುದಾದ ವಿಧಿ ವಿಧಾನಗಳಾದ ಧಾರ್ವಿುಕ ಪಠಣ,

    ಪವಿತ್ರ ನೀರಿನ ಪೋ›ಕ್ಷಣೆ ಇತ್ಯಾದಿ ಮಾಡಲು ಅನುಮತಿಸಬಹುದು. ಮೃತದೇಹವನ್ನು ದಹನ ಮಾಡಿದರೆ ನಂತರ ದೊರೆಯುವ ಬೂದಿಯು ಯಾವುದೇ ತೊಂದರೆ ಉಂಟುಮಾಡದಿರುವುದರಿಂದ, ಅಂತಿಮ ವಿಧಿ ವಿಧಾನ ನಿರ್ವಹಿಸಲು ಬೂದಿಯನ್ನು ಶೇಖರಿಸಿಕೊಳ್ಳಬಹುದು.

    ಯಾವುದನ್ನು ಮಾಡಬಾರದು

    • ಮೃತದೇಹಕ್ಕೆ ಸ್ನಾನ ಮಾಡಿಸುವುದು, ಚುಂಬಿಸುವುದು, ತಬ್ಬಿಕೊಳ್ಳುವುದು ಇತ್ಯಾದಿ ಮಾಡುವಂತಿಲ್ಲ.
    • ಸೋಂಕಿತರ ಶವ ಪರೀಕ್ಷೆ ಮಾಡಲೇಬಾರದು.
    • ಸೋಂಕಿತ ದೇಹವನ್ನು ಕೆಡದಂತೆ ಸಂರಕ್ಷಿಸಲು ಅವಕಾಶ ನೀಡುವಂತಿಲ್ಲ.
    • ಸಮಾಧಿಯ ಸ್ಥಳದಲ್ಲಿ ದೊಡ್ಡಮಟ್ಟದ ಗುಂಪುಗೂಡು ವಿಕೆಗೆ ಅವಕಾಶ ನೀಡದೇ ಅಂತರ ಕಾಯ್ದುಕೊಳ್ಳಬೇಕು.

    ಬಿದಿರಿನ ಕಡ್ಡಿ, ಸಿರಿಂಜ್​ಗಳು, ಗ್ಲಾಸ್​ ಶೀಲ್ಡ್​; ಬಿಹಾರ ಚುನಾವಣೆಗೆ ಇವೆಲ್ಲ ಏಕೆ ಬೇಕು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts