More

    ‘ರಾಮಾಯಣ’ದ ಸೀತೆ ಈಗ ಹೇಗಿದ್ದಾರೆ ಗೊತ್ತಾ?

    ದೂರದರ್ಶನದ ಅತ್ಯಂತ ಜನಪ್ರಿಯ ಧಾರಾವಾಹಿ ಎಂದರೆ ಅದು ರಾಮಾನಂದ ಸಾಗರ್ ನಿರ್ದೇಶನದ ‘ರಾಮಾಯಣ’. 80ರ ದಶಕದಲ್ಲಿ ಪ್ರಸಾರವಾದ ಈ ಧಾರಾವಾಹಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವುದರ ಜತೆಗೆ ಈಗಲೂ ಆ ಜನಪ್ರಿಯತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಈ ಜನಪ್ರಿಯತೆಯನ್ನು ಮನಗಂಡೇ, ದೂರದರ್ಶನವು ಇಂದಿನಿಂದ (ಮಾರ್ಚ್ 28) ಧಾರಾವಾಹಿಯ ಮರುಪ್ರಸಾರ ಶುರು ಮಾಡಿದೆ.

    ಈ ಧಾರಾವಾಹಿಯಿಂದ ಮನೆ ಮಾತಾದವರು ಸೀತೆ ಪಾತ್ರ ಮಾಡಿದ್ದ ದೀಪಿಕಾ ಚಿಖಾಲಿಯಾ. ‘ಸುನ್ ಮೇರಿ ಲೈಲಾ’ ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ದೀಪಿಕಾ, ಕೆಲವು ಚಿತ್ರಗಳಲ್ಲಿ ನಟಿಸಿದರಾದರೂ, ಅವರಿಗೆ ದೊಡ್ಡ ಜನಪ್ರಿಯತೆ ಸಿಕ್ಕಿದ್ದು ಕಿರುತೆರೆಯಲ್ಲಿ. ಅದರಲ್ಲೂ ‘ರಾಮಾಯಣ’ ಧಾರಾವಾಹಿಯ ಸೀತೆ ಪಾತ್ರ ಅವರನ್ನು ದೊಡ್ಡ ಸ್ಟಾರ್‌ನ್ನಾಗಿಸಿತು. ಈ ಜನಪ್ರಿಯತೆಯಿಂದ ಅವರಿಗೆ ಬೇಡಿಕೆ ಹೆಚ್ಚಾಗಿದ್ದಷ್ಟೇ ಅಲ್ಲ, ಬೇರೆ ಬೇರೆ ಭಾಷೆಯ ಚಿತ್ರಗಳಲ್ಲೂ ನಟಿಸುವುದಕ್ಕೆ ಅವಕಾಶ ಸಿಕ್ಕಿತು. ಈ ಅವಕಾಶಗಳನ್ನು ಬಳಸಿಕೊಂಡ ಅವರು, ಕನ್ನಡದಲ್ಲಿ ಶಂಕರ್ ನಾಗ್ ಅಭಿನಯದ ‘ಹೊಸ ಜೀವನ’ ಮತ್ತು ಅಂಬರೀಶ್ ಅಭಿನಯದ ‘ಇಂದ್ರಜಿತ್’ ಮತ್ತು ‘ಕಾಲಚಕ್ರ’ ಚಿತ್ರಗಳಲ್ಲೂ ದೀಪಿಕಾ ನಟಿಸಿದರು. ಆ ನಂತರ ಒಂದು ಹಂತದಲ್ಲಿ ರಾಜಕೀಯಕ್ಕೂ ಕಾಲಿಟ್ಟು, ಭಾರತೀಯ ಜನತಾ ಪಕ್ಷದಿಂದ ಲೋಕಸಭಾ ಸದಸ್ಯೆಯಾದರು.

    ಎಲ್ಲಾ ಸರಿ, ಒಂದು ಕಾಲದಲ್ಲಿ ಇಷ್ಟೊಂದು ಜನಪ್ರಿಯರಾಗಿದ್ದ ದೀಪಿಕಾ ಚಿಖಾಲಿಯಾ, ಈಗ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. 90ರ ದಶಕದಲ್ಲಿ ಹೇಮಂತ್ ಟೋಪಿವಾಲಾ ಅವರೊಂದಿಗೆ ಮದುವೆಯಾದ ದೀಪಿಕಾ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹೇಮಂತ್ ಮತ್ತು ದೀಪಿಕಾಗೆ ನಿಧಿ ಮತ್ತು ಜೂಹಿ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

    90ರ ದಶಕದ ಆರಂಭದಲ್ಲಿ ಬೇರೆಬೇರೆ ಭಾಷೆಗಳ ಹಲವು ಚಿತ್ರಗಳಲ್ಲಿ ನಟಿಸಿದ್ದ ದೀಪಿಕಾ, ಮದುವೆಯ ನಂತರ ಚಿತ್ರರಂಗದಿಂದ ದೂರವಾದರು. ಗಂಡ, ಮನೆ, ಮಕ್ಕಳು ಎಂದು ಬ್ಯುಸಿಯಾಗಿದ್ದ ಅವರು, ಹಲವು ವರ್ಷಗಳ ಕಾಲ ಬಣ್ಣ ಹಚ್ಚಿರಲಿಲ್ಲ. ಯಾವುದೇ ಧಾರಾವಾಹಿ ಅಥವಾ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಹೀಗೆ ತಮ್ಮ ವೈಯಕ್ತಿಕ ಜೀವನಕ್ಕೆ ಪ್ರಾಶಸ್ತ್ಯ ಕೊಟ್ಟಿದ್ದ ಅವರು, ಬಹಳ ವರ್ಷಗಳ ನಂತರ ಇದೀಗ ಬಣ್ಣದ ಲೋಕಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. 2018ರಲ್ಲಿ ಬಿಡುಗಡೆಯಾದ ‘ಗಾಲಿಬ್’ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ದೀಪಿಕಾ ಮತ್ತೆ ಬಣ್ಣ ಹಚ್ಚಿದ್ದಾರೆ. ಆ ನಂತರ ಗುಜರಾತಿ, ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರೆಸಿರುವ ದೀಪಿಕಾ, ಒಂದಿಷ್ಟು ಒಳ್ಳೆಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ದೀಪಿಕಾ, ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಫೋಟೋಗಳನ್ನು ಜತೆಗೆ ಹಲವು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

    ಲಕ್ಷ್ಮಣ ರೇಖೆ ದಾಟದೇ ಇದ್ದವರಿಗೆ ದೂರದರ್ಶನದಿಂದ ಒಂದು ಗಿಫ್ಟ್ – ನಾಳೆ ಬೆಳಗ್ಗೆಯೇ ನಿಮ್ಮ ಮನೆಯೊಳಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts