More

    ಮನ್​ ಕೀ ಬಾತ್​ನಲ್ಲಿ ಸಾಲುಮರದ ತಿಮ್ಮಕ್ಕನನ್ನು ಹೊಗಳಿ, ರಾಷ್ಟ್ರಪತಿಯವರಿಗೆ ಆಶೀರ್ವಾದ ಮಾಡಿದ್ದ ಕ್ಷಣವನ್ನು ನೆನಪಿಸಿಕೊಂಡ ಪ್ರಧಾನಿ

    ನವದೆಹಲಿ: ಮರಗಳನ್ನು ಮಕ್ಕಳಂತೆ ಜೋಪಾನ ಮಾಡುವ ಮೂಲಕ ವೃಕ್ಷಮಾತೆ ಎಂದೇ ಪ್ರಸಿದ್ಧರಾದ ಕರ್ನಾಟಕದ ಸಾಲು ಮರದ ತಿಮ್ಮಕ್ಕನವರನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದಿನ ಮನ್​ ಕೀ ಬಾತ್​ನಲ್ಲಿ ಹೊಗಳಿದರು.

    100 ವರ್ಷ ತುಂಬಿದ ಮಹಿಳೆಯೋರ್ವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಬಳಿಕ ಅವರ ತಲೆ ಮುಟ್ಟಿ ಆಶೀರ್ವದಿಸಿದ್ದರು. ಅದು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ತುಂಬ ಸುದ್ದಿಯಾಗಿ ಹರಿದಾಡಿತ್ತು. ಆ ಮಹಿಳೆ ಕರ್ನಾಟಕದ ಸಾಲುಮರದ ತಿಮ್ಮಕ್ಕ. ಅವರಿಗೆ ಈಗ 106 ವರ್ಷ. ನಾವು ಅಂತಹವರ ಸಾಧನೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮೋದಿ ಹೇಳಿದರು.

    ಹಾಗೇ ಈ ಬಾರಿಯ ಪದ್ಮ ಪ್ರಶಸ್ತಿ ನಿನ್ನೆ ಪ್ರಕಟವಾಗಿದೆ. ಹಲವು ಸಾಧಕರಿಗೆ ನೀಡಲಾಗಿದೆ. ಅವರು ತಮ್ಮತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

    ಪದ್ಮ ಪುರಸ್ಕಾರವೀಗ ಜನರ ಪ್ರಶಸ್ತಿಯಾಗಿ ಮಾರ್ಪಟ್ಟಿದೆ. ದೇಶದ ಬಗ್ಗೆ ನಂಬಿಕೆ ಮತ್ತು ಗೌರವವನ್ನು ಹೆಚ್ಚಿಸಿದೆ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts