ನೆಲಮಂಗಲ: ಮದುವೆಯಾಗಿ ಎಂಟು ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ ಎಂದು ತೀವ್ರವಾಗಿ ನೊಂದ ಮಹಿಳೆಯೊಬ್ಬರು ವಿಷ ಸೇವಿಸಿದ್ದು, ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಗೋರಿನಬೆಲೆ ನಿವಾಸಿ ಕವಿತಾ (27) ಮೃತಪಟ್ಟವರು.
ಇವರು ಎಂಟು ವರ್ಷಗಳ ಹಿಂದೆ ವಸಂತ್ ಕುಮಾರ್ ಎಂಬವರನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ ಎಂಬ ಕೊರಗಿನಲ್ಲಿ ಬಳಲಿದ್ದರು. ಮಕ್ಕಳಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ತೀವ್ರ ನೊಂದಿದ್ದ ಕವಿತಾ, ಆಗಸ್ಟ್ 13ರಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಗಿಡಗಳಿಗೆ ಬಳಸುವ ಕ್ರಿಮಿನಾಶಕ ಸೇವಿಸಿದ್ದರು.
ವಿಷ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ವಿಷ ಸೇವನೆಯ ದುಷ್ಪರಿಣಾಮದಿಂದ ಎರಡು ದಿನಗಳ ಆಸ್ಪತ್ರೆಯಲ್ಲಿ ತೀವ್ರ ಸಂಕಟವನ್ನು ಅನುಭವಿಸಿದ ಆಕೆ, ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಕೊನೆಯುಸಿರೆಳೆದರು. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರನಟಿಗೆ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ; ಬಳಿಕ ನಗ-ನಗದಿನೊಂದಿಗೆ ಪರಾರಿಯಾದ ರೌಡಿಯ ಅಣ್ಣ..