More

    ವಸತಿರಹಿತ ಕುಟುಂಬಗಳ ಸಮೀೆಗೆ ಆಗ್ರಹಿಸಿ ಸ್ಲಂ ಸಮಿತಿಯಿಂದ ಪೌರಾಯುಕ್ತರಿಗೆ ಮನವಿ

    ಗದಗ:
    ಜಿಲ್ಲಾ ಸ್ಲಂ ಸಮಿತಿಯಿಂದ ನೀಡಿರುವ 348 ವಸತಿ ರಹಿತ ಕುಟುಂಬಗಳ ಯಾದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ಸೊಚನೆಯಂತೆ ಸಮೀೆ ನಡೆಸಿ ನೈಜ ವಸತಿರಹಿತ ಕುಟಂಬಗಳಿಗೆ ಮನೆಗಳನ್ನು ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಸಮಿತಿ ಹಾಗೂ ವಸತಿರಹಿತರ ಹೋರಾಟ ಸಮಿತಿ ವತಿಯಿಂದ ಶನಿವಾರ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
    ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಇಮ್ತಿಯಾಜ ಮಾನ್ವಿ ಮಾತನಾಡಿ, ವಸತಿರಹಿತರ ನಿರಂತರ ಹೋರಾಟಗಳ ಪರಿಣಾಮವಾಗಿ ನಗರಸಭೆಯಿಂದ ವಸತಿರಹಿತ ಕುಟುಂಬಗಳ ಸಮೀೆ ನಡೆಸಿದ ನಂತರ ಸಚಿವ ಎಚ್​. ಕೆ. ಪಾಟೀಲರು 2019 ರಲ್ಲಿ 348 ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಿದ್ದಾರೆ. ಆದರೆ, ವಸತಿ ಸೌಲಭ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ನಗರಸಭೆ ವಿಲವಾಗಿದೆ ಎಂದು ಆರೋಪಿಸಿದರು.
    ಈ ಮೊದಲು ನಗರಸಭೆ ವಸತಿ ರಹಿತರ ಸಮೀೆ ನಡೆಸಿದೆ. ಆದರೆ, ನೈಜ ವಸತಿ ರಹಿತರನ್ನು ಕಡೆಗಣಿಸಿದೆ. ಸಮೀೆ ನಡೆಸುವ ಸಂದರ್ಭದಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತ ಬಂದಿರುವ ಕುಟುಂಬಗಳನ್ನು ಕಡೆಗಣಿಸಿದ್ದು ಅಪರಾಧ. ಕಾಟಾಚಾರದ ಸಮೀೆಯನ್ನು ನಿಲ್ಲಿಸಿ ನೈಜ ಯಾದಿಯನ್ನು ಪಡೆಯಬೇಕೆಂದು ಒತ್ತಾಯಿಸಿದರು.
    ಅಶೋಕ ಕುಡತಿನ್ನಿ, ಅಶೋಕ ಕುಸಬಿ, ವಂದನಾ ಶ್ಯಾವಿ, ಮರ್ದಾನಬಿ ಬಳ್ಳಾರಿ, ಕಮಲವ್ವ ಚಲವಾದಿ, ಕವಿತಾ ಶ್ಯಾವಿ, ದ್ಯಾಮಣ್ಣ ಡೋಣಿ, ವಿಶಾಲ ಹಿರೇಗೌಡ್ರ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts