More

    ಯೋಗ-ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭಕ್ಕೆ ಸಿದ್ಧತೆ: ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ್ ಹೇಳಿಕೆ

    ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ವರ್ಷದಿಂದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭಿಸಲು ಪೂರ್ವತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಕುಲಪತಿ ಡಾ.ಸ.ಚಿ.ರಮೇಶ ಹೇಳಿದರು. ಯೋಗ ಅಧ್ಯಯನ ವಿಭಾಗ ಮತ್ತು ವಿಜಯನಗರ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಜೂ.21 ರವರೆಗೆ ಹಮ್ಮಿಕೊಂಡಿರುವ ಉಚಿತ ಆನಲೈನ್ ಯೋಗ ತರಬೇತಿ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

    ಕರೊನಾ ಸೋಂಕಿನ ಸಂದರ್ಭದಲ್ಲಿ ಶರೀರ ಮತ್ತು ಮನಸ್ಸನ್ನು ಸ್ವಸ್ಥವಾಗಿಡಲು, ಖಿನ್ನತೆ ದೂರಮಾಡಲು ಆಸನ-ಪ್ರಾಣಾಯಾಮ-ಧ್ಯಾನ ಬಹಳ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳುವುದು ಅವಶ್ಯ. ಯೋಗ ಶಿಕ್ಷಣಕ್ಕಾಗಿಯೇ ಕನ್ನಡ ವಿವಿಯಲ್ಲಿ ಈಗಾಗಲೇ ಯೋಗ ಅಧ್ಯಯನ ವಿಭಾಗವಿದೆ. ಯೋಗ ಸರ್ಟಿಫಿಕೇಟ್, ಡಿಪ್ಲೊಮಾ ಮತ್ತು ಎಂಎಸ್ಸಿ ಸ್ನಾತಕೊತ್ತರ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು, ಯುವಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

    ಪತಂಜಲಿ ಯೋಗ ಪೀಠದ ಪ್ರಭಾರ ಯೋಗಾಚಾರ್ಯ ಭವರಲಾಲ್ ಆರ್ಯ ಮಾತನಾಡಿ, ರೋಗ ನಿರೋಧಕ ಶಕ್ತಿ ವೃದ್ಧಿಗೆ ಯೋಗ-ಪ್ರಾಣಾಯಾಮ-ಧ್ಯಾನ ಹೆಚ್ಚು ಸಹಾಯಕಾರಿಯಾಗಿದೆ ಎಂದು ತಿಳಿಸಿದರು. ಯೋಗ ಅಧ್ಯಯನ ವಿಭಾಗದ ನಿರ್ದೇಶಕ ಡಾ.ಎಫ್.ಟಿ.ಹಳ್ಳಿಕೇರಿ ಮಾತನಾಡಿದರು. ಯೋಗ ಸಮಿತಿ ಪದಾಧಿಕಾರಿಗಳಾದ ದಾಕ್ಷಾಯಣಿ ಶಿವಕುಮಾರ, ಬಾಲಚಂದ್ರಶರ್ಮ, ಕಿರಣಕುಮಾರ್, ಕೃಷ್ಣ ನಾಯಕ, ವೀರೇಶ ಕನಕೇರಿಮಠ, ವಿಠೋಬಾ ಬಲ್ಲೂರ, ಜಯಶ್ರೀ ಇದ್ದರು. 500 ಕ್ಕೂ ಹೆಚ್ಚು ಜನರು ಯೋಗ ಶಿಬಿರದಲ್ಲಿ ಆನ್‌ಲೈನ್ ಮೂಲಕ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts