More

    ರಾಜ್ಯಾದ್ಯಂತ ಸಾರಥಿ ಸೂರು ವಿಸ್ತರಿಸುವಂತೆ ವಿವಿಧ ಗೂಡ್ಸ್ ಚಾಲಕರ ಸಂಘ ಆಗ್ರಹ

    ಹೊಸಪೇಟೆ: ಹಂಪಿ ಪ್ರಾಧಿಕಾರದ ನಿಯಮ ಉಲ್ಲಂಘಿಸಿ ಹಂಪಿ ಭಾಗದಲ್ಲಿ ರೆಂಟ್ ಎ ಮೋಟರ್ ಸೈಕಲ್ ಸ್ಟೀಮ್ ಹೆಸರಿನಲ್ಲಿ ದ್ವಿಚಕ್ರ ವಾಹನಗಳಿಗೆ ಪರವಾನಗಿ ನೀಡಿರುವುದನ್ನು ಕೂಡಲೇ ಹಿಂಪಡೆಯಬೇಕು ಸೇರಿದಂತೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಡರೇಷನ್ ಆಫ್ ಕರ್ನಾಟಕ ಆಟೋರಿಕ್ಷಾ ಚಾಲಕರ ಯೂನಿಯನ್ಸ್, ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘ, ಲಘು ವಾಹನ ಹಾಗೂ ಮಿನಿ ಲಾರಿ ಚಾಲಕರ ಸಂಘ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದವು.

    ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಿಂದ ರಾಣಿ ಪೇಟೆಯಲ್ಲಿರುವ ಸಚಿವ ಆನಂದ ಸಿಂಗ್ ನಿವಾಸದ ವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಸಚಿವಗೆ ಮನವಿ ಸಲ್ಲಿಸಿದರು. ಸಾರ್ವಜನಿಕರಿಗೆ ಸಾರಿಗೆ ಸೇವೆಯನ್ನು ಸಲ್ಲಿಸುತ್ತ ಆಟೋ ಚಾಲಕರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ತೈಲ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಸಿಎನ್‌ಜಿ, ಎಲ್‌ಪಿಜಿ ಬೆಲೆಗಳು ದುಪ್ಪಟ್ಟಾಗಿವೆ. ವಾಹನಗಳ ಬಿಡಿ ಭಾಗಗಳು ಹಾಗೂ ವಾಹನ ಖರೀದಿ ಸಂದರ್ಭದಲ್ಲಿ ತೆರಿಗೆ ಕಟ್ಟುವುದರ ಜತೆಗೆ ವಾಹನಗಳ ಥರ್ಡ್ ಪಾರ್ಟಿ ವಿಮೆ, ದಂಡದ ಹೆಸರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂ. ಬೊಕ್ಕಸ ತುಂಬುಕೊಳ್ಳುತ್ತಿವೆ. ಆದರೆ, ಚಾಲಕರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸದಿರುವುದು ಖಂಡನೀಯ.

    ಅಲ್ಲದೆ, ರಾಜ್ಯ ಸರ್ಕಾರ ಖಾಸಗಿ ವ್ಯಕ್ತಿಗಳಿಂದ ಬ್ಯಾಟರಿ ಚಾಲಿತ ವಾಹನಗಳನ್ನು ಹಂಪಿ ಭಾಗದಲ್ಲಿ ತಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪರಿಸ್ಥಿತಿ ಸ್ನೇಹ ಆಟೋ ರಿಕ್ಷಾಗಳಿಗೆ ಹಂಪಿ ಭಾಗದಲ್ಲಿ ಅವಕಾಶ, ತಾಲೂಕಿನಲ್ಲಿ ವಾಸ ಮಾಡುತ್ತಿರುವ ಆಟೋ ರಿಕ್ಷಾ ಚಾಲಕರಿಗೆ ಆಟೋ ನಗರ ನಿರ್ಮಾಣ ಮಾಡುವ ಭರವಸೆ ನೀಡಿದ್ದು, ಈವರೆಗೂ ಈಡೇರಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

    ರಾಜ್ಯ ಸರ್ಕಾರದ ಮಹತ್ವ್ವಾಕಾಂಕ್ಷಿ ಸಾರಥಿ ಸೂರು ಯೋಜನೆ ಬೆಂಗಳೂರಿಗೆ ಸೀಮಿತವಾಗಿದ್ದು, ಅದನ್ನು ರಾಜ್ಯಾದ್ಯಂತ ವಿಸ್ತರಿಸಬೇಕು. ಹೊಸಪೇಟೆಯ ನಿವೇಶನ, ವಸತಿ ರಹಿತ ಆಟೋರಿಕ್ಷಾ ಚಾಲಕರಿಗೆ ಆಶ್ರಯ ಮನೆ ಕಲ್ಪಿಸಬೇಕು. ಹಂಪಿ ಭಾಗದಲ್ಲಿ ಬ್ಯಾಟರಿ ಚಾಲಿತ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಆಟೋರಿಕ್ಷಗಳಿಗೂ ಅವಕಾಶ ಮಾಡಿಕೊಡಬೇಕು. ಹಂಪಿ ಮತ್ತು ಆನೆಗೊಂದಿ ಭಾಗದಲ್ಲಿ ಅನಧಿಕೃತವಾಗಿ ಖಾಸಗಿ ದ್ವಿಚಕ್ರ ವಾಹನ ಬಾಡಿಗೆ ನೀಡುವುದನ್ನು ತಡೆಗಟ್ಟಬೇಕು. ರಾಜ್ಯದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಇತರೆ ಇಲಾಖೆಯಿಂದ ಟ್ಯಾಕ್ಸಿಗಳ ಖರೀದಿಗೆ ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.

    ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಡಿ.ವೆಂಕಟರಮಣ, ಆರ್.ವೈ.ರಾಮಚಂದ್ರ ಬಾಬು, ಗೋವಿಂದ್ ರಾಜ್, ತಿಪ್ಪೇಶ್, ಮಂಜುನಾಥ್, ಗಿರಿಜಪ್ಪ ಹಂಪಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts