More

    ಆನ್‌ಲೈನ್ ಮಾರ್ಕೆಟಿಂಗ್ ಅಳವಡಿಸಿಕೊಳ್ಳಿ: ಜಿಪಂ ಸಿಇಒ ಸದಾಶಿವ ಪ್ರಭು ಸಲಹೆ

    ಆನ್‌ಲೈನ್ ಮಾರ್ಕೆಟಿಂಗ್ ಅಳವಡಿಸಿಕೊಳ್ಳಿ: ಜಿಪಂ ಸಿಇಒ ಸದಾಶಿವ ಪ್ರಭು ಸಲಹೆ

    ಹೊಸಪೇಟೆ: ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹೊಸ ತಂತ್ರಜ್ಞಾನದ ವಿಧಗಳನ್ನು ಅರಿತುಕೊಳ್ಳಬೇಕು ಎಂದು ಜಿಪಂ ಸಿಇಒ ಸದಾಶಿವ ಪ್ರಭು ಬಿ. ತಿಳಿಸಿದರು.

    ಇಲ್ಲಿನ ತಾಪಂ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ- ಸಂಜೀವಿನಿ(ಎನ್‌ಆರ್‌ಎಲ್‌ಎಂ) ಅಭಿಯಾನದಡಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಶುಕ್ರವಾರ ಹಮ್ಮಿಕೊಂಡಿದ್ದ 6 ದಿನಗಳ ಉದ್ಯಮಶೀಲತಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯನ್ನು ಅರಿತು ತಮ್ಮ ವ್ಯಾಪಾರ, ವಹಿವಾಟುಗಳನ್ನು ಲಾಭದಾಯಕವನ್ನಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಜಿಪಂ ಯೋಜನಾ ನಿರ್ದೇಶಕ ಅಶೋಕ್ ತೋಟದ್ ಮಾತನಾಡಿ, ಚಿಕ್ಕ ಚಿಕ್ಕ ಘಟಕಗಳನ್ನು ಸ್ಥಾಪಿಸಿ ಉದ್ಯಮವನ್ನು ಉನ್ನತ ಮಟ್ಟಕ್ಕೆ ಕೊಂಡ್ಯೊಯ್ಯಬಹುದು. ಅದಕ್ಕೆ ಅವಶ್ಯವಾದ ಸೌಲಭ್ಯಗಳನ್ನು ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ತಾಪಂ ಅಧಿಕಾರಿಗಳಾದ ಬಸವರಾಜ್, ಕಾವ್ಯಾ ವೈ.ಪಿ., ವಿನೋದ್ ಕುಮಾರ್, ಮಂಜುನಾಥ್, ಭಾರ್ಗವ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts