More

    ಕೃಷ್ಣಾನಗರ ತಾಂಡಾ ಜನರ ಒಕ್ಕಲೆಬ್ಬಿಸಲು ಬಿಡಲ್ಲ: ಸಂಸದ ಉಮೇಶ್ ಜಾಧವ್ ಭರವಸೆ, ನಿವಾಸಿಗಳ ಮನವಿ ಮೇರೆಗೆ ಭೇಟಿ

    ಹೊಸಪೇಟೆ: ನಗರ ಹೊರವಲಯದ ಕೃಷ್ಣಾನಗರ ತಾಂಡಾ(ಬದ್ಯಾನಾಯ್ಕಾ ತಾಂಡಾ)ಕ್ಕೆ ಕಲಬುರಗಿ ಸಂಸದ ಉಮೇಶ್ ಜಾಧವ್ ಭಾನುವಾರ ಭೇಟಿ ನೀಡಿ ಸಮಸ್ಯೆ ಆಲಿಸಿದರು.

    ತಾಂಡಾವನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕನಿಷ್ಠ ಕುಡಿವ ನೀರು, ಚರಂಡಿ, ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ. 90 ವರ್ಷಗಳಿಂದ ಇಲ್ಲಿ ಬಂಜಾರ, ಕೊರಮ, ಕೊರಚ ಜನಾಂಗದವರು ವಾಸಿಸುತ್ತಿದ್ದೇವೆ. ಈ ಪ್ರದೇಶದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಏಕಾಏಕಿ ಜಾಗ ಖಾಲಿ ಮಾಡುವಂತೆ ಸಚಿವರು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಬೇರೆಡೆ ಹೋಗಲ್ಲ. ಸೂಕ್ತ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಇಲ್ಲಿನ ನಿವಾಸಿಗಳು ಇತ್ತೀಚೆಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಉಮೇಶ ಜಾಧವ್ ಭೇಟಿ ನೀಡಿದ್ದರು.

    ಸುಮಾರು ಮೂರ್ನಾಲ್ಕು ತಲೆಮಾರುಗಳಿಂದ ಜನ ಇಲ್ಲಿ ವಾಸ ಮಾಡುತ್ತಿದ್ದಾರೆ. ಈ ಹಿಂದೆ ನಾನು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಶಾಸಕನಾಗಿದ್ದಾಗ ಕೆಲವು ಅಕ್ರಮ ಸಕ್ರಮದಡಿಯಲ್ಲಿ ಮಾಡಿಕೊಟ್ಟಿದ್ದೇವೆ. ಹಕ್ಕುಪತ್ರ ನೀಡುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಕೆ.ಎಸ್. ಈಶ್ವರಪ್ಪ, ಆನಂದ ಸಿಂಗ್ ಜತೆ ಮಾತನಾಡುವೆ. ಒಕ್ಕಲೆಬ್ಬಿಸಲು ಬಿಡಲ್ಲ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸಂಸದ ಉಮೇಶ ಧೈರ್ಯ ತುಂಬಿದರು. ಜಿಲ್ಲಾ ಬಂಜಾರ ಸೇವಾ ಸಂಘದ ಉಪಾಧ್ಯಕ್ಷ ವಿ.ಕೃಷ್ಣಾ ನಾಯ್ಕ, ತಾಲೂಕು ಅಧ್ಯಕ್ಷ ಜಿ.ಪ್ರವೀಣ್ ನಾಯ್ಕ, ತೇಜಾನಾಯ್ಕ, ಕೆ.ಪಿ.ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts