More

    ಜೈನ ದೀಕ್ಷಾ ಮಹೋತ್ಸವ ಜ.18

    ಹೊಸಪೇಟೆ: ನಗರದಲ್ಲಿ ಜ.18 ರಂದು ಜೈನ ಸಮುದಾಯದ ಯುವತಿ ಮುಮುಕ್ಷು ವಿಧಿ ಕುಮಾರಿ ಅವರು ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ ಎಂದು ಜೈನ ಮುನಿ ಆಚಾರ್ಯ ಭಗವಂತ ಶ್ರೀ ನರರತ್ನ ಸೂರಿಶ್ವರಜೀ ಮಹಾರಾಜರು ತಿಳಿಸಿದರು.

    ನಗರದ ಜೈನ ಧರ್ಮಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದ ವತಿಯಿಂದ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಜ.17 ರಂದು ರಾಜಕುಮಾರಿ ಮುಮಕ್ಷು ವಿಧಿ ಕುಮಾರಿ ಅವರ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ನಗರದ ಮೇನ್ ಬಜಾರ್‌ನಿಂದ ಆರಂಭಗೊಂಡು ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ, ಹೋಟೆಲ್ ಮಲ್ಲಿಗೆ ಸಭಾಂಗಣಕ್ಕೆ ತಲುಪಿ, ಅಲ್ಲಿ ಸಂಪನ್ನಗೊಳ್ಳಲಿದೆ ಎಂದರು.

    ನಗರದ ಉದ್ಯಮಿ ಕಾಂತಿಲಾಲಾ ಜಿ ಜಿರಾವಲಾ ಮತ್ತು ರೇಖಾದೇವಿ ಜಿರಾವಲಾ ದಂಪತಿ ನಾಲ್ವರು ಪುತ್ರಿಯರಲ್ಲಿ ಮುಮುಕ್ಷು ಮೂರನೇಯವರು. 10ನೇ ತರಗತಿಯಲ್ಲಿ ಶೇ.94.8, ಪಿಯುಸಿಯಲ್ಲಿ ಶೇ.99 ಫಲಿತಾಂಶ ಪಡೆದಿದ್ದಾರೆ. ಬಾಲ್ಯದಿಂದಲೇ ಜೈನ ಸನ್ಯಾಸ ತತ್ವದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. 10 ಮತ್ತು 17ನೇ ವಯಸ್ಸಿನಲ್ಲಿ 48 ದಿನ ಉಪಧ್ಯಾನ ತಪ ಸಂಪನ್ನಗೊಳಿಸಿದ್ದಾರೆ ಎಂದು ಹೇಳಿದರು.

    ದೇಶದಲ್ಲಿ ಪ್ರತೀ ವರ್ಷ 300 ಯುವಕ-ಯುವತಿಯರು ಸನ್ಯಾಸತ್ವ ಸ್ವೀಕರಿಸುತ್ತಾರೆ. ಲೌಕಿಕ ಬದುಕಿಗೆ ಮರಳಿದ ಉದಾಹರಣೆಗಳಿಲ್ಲ. ಸನ್ಯಾಸತ್ವ ಸ್ವೀಕರಿಸಿರುವ ಬಹುತೇಕರು ಕೋಟ್ಯಧೀಶರು, ಅವರ ಪಾಲಕರು ಸಿರಿವಂತರು. ಮನೆಯಲ್ಲಿ ಯಾವುದೇ ಕೊರತೆಗಳಿರುವುದಿಲ್ಲ. ಆದರೆ, ಆಡಂಬರ ಜೀವನ, ಮಾನವ ಸಂಬಂಧಗಳಲ್ಲಿ ಯಾವುದೇ ಅರ್ಥವಿಲ್ಲ ಎಂಬ ವೈರಾಗ್ಯದಿಂದಲೇ ಸನ್ಯಾಸತ್ವ ಸ್ವೀಕರಿಸುತ್ತಾರೆ ಎಂದು ವಿವರಿಸಿದರು.

    ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದ ಅಧ್ಯಕ್ಷ ಕೇಸರಿಮಲ್ ಜೈನ್, ಕಾರ್ಯದರ್ಶಿ ಮಹೇಂದ್ರ ಜೈನ್, ಜಂಟಿ ಕಾರ್ಯದರ್ಶಿ ಅಶೋಕ್ ಮೋದಿ, ಸಮಾಜದ ಮುಖಂಡರಾದ ಅಶೋಕ್ ಬಾಗ್ರೇಚ್, ಮಹೇಂದ್ರ ಕನುಜಾ ಹಾಗೂ ಅಶೋಕ್ ಪೋರವೆಲ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts