More

    ಹಂಪಿ ವೀಕ್ಷಿಸಿದ ಆಗ್ನೇಯ ಏಷ್ಯಾದ ರಾಯಭಾರಿಗಳು

    ಹೊಸಪೇಟೆ: ಆಗ್ನೇಯ ಏಷ್ಯಾ ದೇಶಗಳ ರಾಯಭಾರಿಗಳು ಶನಿವಾರ ಹಂಪಿಯನ್ನು ವೀಕ್ಷಿಸಿದರು. ವಿರೂಪಾಕ್ಷೇಶ್ವರಸ್ವಾಮಿ ದೇವರ ದರ್ಶನ ಪಡೆದು, ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿ ಇಲ್ಲಿನ ಕಲಾಕೃತಿ ಕೆತ್ತನೆಗಳಿಗೆ ಮನಸೋತರು. ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ಪುಷ್ಕರಣಿ, ಹಜಾರ ರಾಮಚಂದ್ರ ದೇವಸ್ಥಾನ, ಕಮಲ ಮಹಲ್, ವಿಜಯವಿಠಲ ದೇವಸ್ಥಾನ ಸೇರಿದಂತೆ ಪ್ರಮುಖ ಸ್ಮಾರಕಗಳನ್ನು ವೀಕ್ಷಿಸಿದರು.

    ಭಾರತಕ್ಕೆ ಬಂದಿರುವ ಕೋಲಂಬಿಯ ರಾಯಭಾರಿ ಉಂಗ್‌ಸಿಯಾನ್, ಪತ್ನಿ ಸೋಕ ಸಮ್ಕೋಲ್, ಕೊಲಂಬಿಯ ಎಂಬಾಸ್ಸಿ ಕಾರ್ಯದರ್ಶಿ ಶ್ರೇಯಾಂಗ್ ಸೆಂಗ್ಕಿಯ, ಲಾಹೋ ರಾಯಭಾರಿ ಎಚ್.ಇ. ಬೌನ್ನೆಮೆ ಚೌಂಗಾಮ್, ಮಾಯಾನ್ಮಾರ್ ರಾಯಭಾರಿ ಎಚ್.ಇ. ಮಿಯೊ ಕಿಯೊ ಔಂಗ್, ವಿಯೇಟ್ನಾಂ ಡಿಸಿಎಂ ದೊ ತಾನ್ಹ್ ಹೈ, ಪತ್ನಿ ದೌಂಗ್ ತು ತ್ರಾಂಗ್ ಹಾಗೂ ಎಎಸ್‌ಒ(ದಕ್ಷಿಣ)ಬಾಹ್ಯ ವ್ಯವಹಾರಗಳ ಮಂತ್ರಿ ಸೊಂಬೀರ್ ಹಂಪಿಗೆ ಭೇಟಿ ನೀಡಿ ಭಾರತೀಯ ಸಂಸ್ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಹಂಪಿ ಮಾರ್ಗದರ್ಶಿಗಳಾದ ಜಿ ಮಂಜುನಾಥ್ ಗೌಡ, ವಿರೂಪಾಕ್ಷಿ ವಿ ಹಂಪಿ, ಎಚ್ ಹುಲಗಪ್ಪ ಗೈಡ್ ಮಾಡಿದರು. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಪ್ರಶಾಂತ್, ಶಿವಲಿಂಗಪ್ಪ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇದ್ದರು. ಪೊಲೀಸ್ ಇಲಾಖೆ ಅಧಿಕಾರಿಗಳು ಭದ್ರತೆಯನ್ನು ಒದಗಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts