More

    ಮೈದಾನದಲ್ಲಿದ್ದ ಮರಗಳನ್ನು ಕಡಿದಿದ್ದಕ್ಕೆ ವಿವಿಧ ಸಂಘಟನೆಗಳಿಂದ ಅಸಮಾಧಾನ ವ್ಯಕ್ತ

    ಹೊಸಪೇಟೆ: ನಗರದ ಮುನ್ಸಿಪಲ್ ಮೈದಾನದಲ್ಲಿದ್ದ ಬೃಹತ್ ಬೇವಿನ ಮರ, ಇತರೆ ಮರಗಳನ್ನು ಕಡಿದಿರುವುದನ್ನು ಖಂಡಿಸಿ ಡಾ.ಬಿ.ಆರ್.ಅಂಬೇಡ್ಕರ್ ಸಂಘ, ಎಸ್‌ಎಫ್‌ಐ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಮರಗಳನ್ನು ಕಡಿದು ಹಾಕಿದ ಸ್ಥಳದಲ್ಲಿ ಸೇರಿದ ಕಾರ್ಯಕರ್ತರು, ಮರಗಳ ಕೊಂಬೆಗಳ ಮೇಲೆ ಕುಳಿತು ವಿನೂತನ ಪ್ರತಿಭಟನೆ ನಡೆಸಿದರು.

    ಸಂಘದ ಮುಖಂಡ ಸೋಮಶೇಖರ್ ಬಣ್ಣದಮನೆ ಮಾತನಾಡಿ, ಈ ಮರಗಳು ಮುನ್ಸಿಪಲ್ ಮೈದಾನಕ್ಕೆ ನೆರಳಾಗಿದ್ದವು. ಅವುಗಳನ್ನು ಕಡಿದಿರುವುದು ಸರಿಯಲ್ಲ. ಕ್ರೀಡಾಂಗಣ ಅಭಿವೃದ್ಧಿಗೆ ಸಚಿವರು ಮುಂದಾಗಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಮರಗಳನ್ನು ಉಳಿಸಿಕೊಳ್ಳಬೇಕಿತ್ತು. ಮುನ್ಸಿಪಲ್ ಮೈದಾನಕ್ಕೆ ಹೊಂದಿಕೊಂಡಂತೆ ಅನೇಕ ಶಾಲಾ, ಕಾಲೇಜುಗಳಿವೆ. ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಮರಗಳ ನೆರಳಿನಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುತ್ತಿದ್ದರು. ಆಟವಾಡಿ ದಣಿದವರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಈಗ ಅದೆಲ್ಲ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಸಂಘಟನೆ ತಾಲೂಕು ಅಧ್ಯಕ್ಷ ಜೆ. ಶಿವುಕುಮಾರ್ ಮಾತನಾಡಿ, ಮರಗಳು ಬೀಳುವ ಹಂತಕ್ಕೆ ಬಂದಿದ್ದವು ಎಂದು ನಗರಸಭೆ ಪೌರಾಯುಕ್ತ ಹೇಳಿಕೆ ಕೊಟ್ಟಿದ್ದಾರೆ. ಅದು ಸುಳ್ಳು. ಒಂದುವೇಳೆ ಅವುಗಳು ಬೀಳುವ ಹಂತಕ್ಕೆ ಬಂದಿದ್ದರೆ ಕೊಡಲಿಯಿಂದ ಕಡಿದು, ಬಳಿಕ ಜೆಸಿಬಿ ಸಹಾಯದಿಂದ ಅವುಗಳನ್ನು ನೆಲಕ್ಕುರುಳಿಸಿದ್ದು ಏಕೆ ? ಜನ ಆಮ್ಲಜನಕಕ್ಕಾಗಿ ಪರದಾಡುತ್ತಿದ್ದಾರೆ. ಇಂತಹ ವೇಳೆ ಮರ ಕಡಿದಿರುವುದು ಸರಿಯಲ್ಲ ಎಂದರು. ಸಂಘದ ಅಧ್ಯಕ್ಷ ವಾಸುದೇವ್, ಮಾಲತೇಶ್, ಚರಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts