More

    ಇದು ರಜೆಯ ದಿನವಲ್ಲ ಜವಾಬ್ದಾರಿಯ ದಿನ

    ಹೊಸಪೇಟೆ: ವಿಜಯನಗರ ನಾಗರೀಕಾ ವೇದಿಕೆ ಹಾಗೂ ಆದಿತ್ಯ ಹೃದಯಂ ಸಂಘಟನೆಯಿAದ ನಗರದ ಪುನಿತ್ ರಾಜ್‌ಕುಮಾರ್ ವೃತ್ತದಲ್ಲಿ ಮಂಗಳವಾರ ಭ್ರಷ್ಟಾಚಾರ ಮುಕ್ತ ಮತದಾನ ಜಾಗೃತಿಯ ನಡೆಸಲಾಯಿತು.

    ವೇದಿಕೆಯ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ ಮೇ.7 ರಂದು ನಡೆಯಲಿರುವ ಲೋಕಸಭಾ ಚುನಾವಣೆ ದೊಡ್ಡ ಪ್ರಮಾಣದಲ್ಲಿ ಮತದಾನ ಮಾಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರು ಹಕ್ಕು ಮತ್ತು ಅಧಿಕಾರವನ್ನು ಚಲಾಯಿಸಿ ದೇಶದ ಭವಿಷ್ಯವನ್ನು ನಿರ್ಧರಿಸುವ ಅವಕಾಶ ದೊರೆತಿದೆ. ಮತದಾನ ದಿನವೆಂದರೆ ಅದು ರಜೆಯ ದಿನವಲ್ಲ. ಜವಾಬ್ದಾರಿಯ ದಿನ, ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಬೇಕಾದರೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯುವ ನಿಟ್ಟಿನಲ್ಲಿ ಜಾತಿ, ಧರ್ಮ ಹಣದ ಅಮಿಷಕ್ಕೆ ಒಳಗಾಗದೇ ಮತ ಚಲಾಯಿಸಬೇಕು. ಮತದಾರರು ಸ್ವಯಂ ವಿವೇಚನೆಯಿಂದ ಮತ ಚಲಾಯಿಸಿದಾಗ ಮಾತ್ರ ಉತ್ತಮ ಸರ್ಕಾರ ರಚನೆಯಾಗುತ್ತದೆ. ಮತದಾರರು ಯಾವುದೇ ಆಮೀಷಕ್ಕೆ ಒಳಗಾಗದೇ ಮತಚಲಾಯಿಸುವ ಅಗತ್ಯವಿದೆ ಎಂದರು.

    ಬಿಸಿಲಿನ ಪ್ರಕರತೆ ಹಾಗೂ ಬಿಸಿಗಾಳಿ ಹೆಚ್ಚಾಗಿರುವುದರಿಂದ ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ ಮತಗಟ್ಟೆಗಳಿಗೆ ಹೋಗಿ ಬರಲು ಜಿಲ್ಲಾಡಳಿತವು ಸಾರಿಗೆ ವ್ಯವಸ್ಥೆ ಹಾಗೂ ಮತಗಟ್ಟೆಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಿದರೆ ಮತದಾನದ ಪ್ರಮಾಣ ಹೆಚ್ಚಾಗುತ್ತದೆ ಎಂದರು.

    ಆದಿತ್ಯ ಹೃದಯಂ ಸಂಘದ ಸಂಚಾಲಕ ಪ್ರೋ.ಜಿ.ಉಮಾಮಹೇಶ್ವರ್, ಪ್ರೊ.ಲಕ್ಷö್ಮಣ ಕರೀಭೀಮಣ್ಣನವರ್, ರಾಮನಮಲಿ, ಶಂಕ್ರಪ್ಪ, ಜಾನಕಿ, ಲಕ್ಷö್ಮಣನಾಯ್ಕ, ಶ್ರೀನಿವಾಸಕಬ್ಬೇರ, ರಾಮಕೃಷ್ಣ, ಬೋಡಾರಾಮಪ್ಪ, ಗೋಪಿನಾಥ್, ವರುಣ್, ಐಲಿಸಿದ್ದಣ್ಣ, ಕೆ.ವಿರುಪಾಕ್ಷಪ್ಪ, ರವಿಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts