More

    ಹೊಸಪೇಟೆಯಲ್ಲಿ 55.9 ಕೆಜಿ ಗಾಂಜಾ ವಶ: ಕಿಂಗ್‌ಪಿನ್, ಪೆಡ್ಲರ್ ಸೇರಿ ಆರು ಜನ ಬಂಧನ

    ಹೊಸಪೇಟೆ: ನಗರದಲ್ಲಿ ದೊಡ್ಡ ಪ್ರಮಾಣದ ಗಾಂಜಾ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. 11,21,350 ರೂ. ಮೌಲ್ಯದ 55.930 ಕೆಜಿ ಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು, ಕಿಂಗ್‌ಪಿನ್, ಪೆಡ್ಲರ್ ಮತ್ತು ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ.

    ನಗರದಲ್ಲಿ ಶನಿವಾರ ಡಿವೈಎಸ್ಪಿ ವಿ.ರಘುಕುಮಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಸೆ.14 ರಿಂದ 18 ರೊಳಗೆ ನಗರದ ಮ್ಯಾಸಕೇರಿ, ಕನಕದಾಸ ವೃತ್ತ ಹಾಗೂ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಮಾರಾಟವಾಗುತ್ತಿದ್ದ ಗಾಂಜಾ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೂರು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಾಂಜಾ ಮಾರಾಟದಲ್ಲಿ ಕಿಂಗ್‌ಪಿನ್ ಆಗಿರುವ ಮ್ಯಾಸಕೇರಿ ಹೇಮಲತಾ ಸೇರಿದಂತೆ ಜೆ.ಹನುಮೇಶ, ಜೆ.ಷಣ್ಮುಖ, ವಿದ್ಯಾರ್ಥಿಗಳಾದ ಕಾನಹೊಸಳ್ಳಿಯ ಎಂ.ಎಚ್.ಮಧುಸೂಧನ, ಧರ್ಮಸಾಗರದ ಸುರೇಶಕುಮಾರ, ಬಳ್ಳಾರಿಯ ಪೆಡ್ಲರ್ ಕೌಲಬಜಾರಿನ ಇರ್ಫಾನ್ ಬಂಧಿತರು.

    ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಗ್ರಾಮೀಣ ಠಾಣೆ ಸಿಪಿಐ ಶ್ರೀನಿವಾಸ ಮೇಟಿ, ಪಿಎಸ್‌ಐ ಬಸವರಾಜ ಮತ್ತು ತಂಡ, ನಗರಠಾಣೆ ಸಿಪಿಐ ಎಂ.ಶ್ರೀನಿವಾಸರಾವ್, ಪಿಎಎಸ್‌ಐ ಯಲ್ಲಪ್ಪಕದರಳ್ಳಿ, ಎಎಸ್‌ಐ ಕೋದಂಡಪಾಣಿ ಮತ್ತು ತಂಡ, ಟಿಬಿ ಡ್ಯಾಂ ಠಾಣೆ ಸಿಪಿಐ ವಿ.ನಾರಾಯಣ, ಬಡಾವಣೆ ಠಾಣೆಯ ಪಿಎಸ್‌ಐ ಪಿ.ಜಡಿಯಪ್ಪ ಮತ್ತು ತಂಡವು ಯಶಸ್ವಿಯಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts